ಬಿಜೆಪಿ ಸರ್ಕಾರ ಬಂದ ಮೇಲೆ ಈ ಸರ್ಕಾರದ ನಿರ್ಣಯ ಕಿತ್ತು ಹಾಕ್ತೇವೆ: ಯತ್ನಾಳ

| Published : Dec 07 2024, 12:30 AM IST

ಬಿಜೆಪಿ ಸರ್ಕಾರ ಬಂದ ಮೇಲೆ ಈ ಸರ್ಕಾರದ ನಿರ್ಣಯ ಕಿತ್ತು ಹಾಕ್ತೇವೆ: ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಸಾಬರು ಅಂದರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಹಿಂದೂಗಳ ಪೇಟ, ಕುಂಕುಮ ಅಂದರೆ ಆಗಿ ಬರಲ್ಲ. ಮುಸ್ಲಿಮರಿಗೆ ಕಾಂಟ್ರ್ಯಾಕ್ಟ್‌, ಶಿಕ್ಷಣದಲ್ಲಿ ರಿಸರ್ವೇಶನ್‌ ಕೊಡುತ್ತಾರೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಬ್ರು (ಮುಸ್ಲಿಮರು) ಅಂದ್ರ ಬಹಳ ಪ್ರೀತಿ. ಇನ್ನು 3 ವರ್ಷ ಸಾಬರಿಗೆ ಏನೇನು ಮಾಡುತ್ತಾರೋ ಮಾಡಲಿ. ಆಮೇಲೆ ನಮ್ಮ ಸರ್ಕಾರ ಬರುತ್ತೆ. ಎಲ್ಲವನ್ನು ಕಿತ್ತು ಹಾಕುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಾಬರು ಅಂದರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಹಿಂದೂಗಳ ಪೇಟ, ಕುಂಕುಮ ಅಂದರೆ ಆಗಿ ಬರಲ್ಲ. ಮುಸ್ಲಿಮರಿಗೆ ಕಾಂಟ್ರ್ಯಾಕ್ಟ್‌, ಶಿಕ್ಷಣದಲ್ಲಿ ರಿಸರ್ವೇಶನ್‌ ಕೊಡುತ್ತಾರೆ. ಇನ್ನು 3 ವರ್ಷ ಇದೆ. ಏನೇನು ಮಾಡುತ್ತಾರೆ ಮಾಡಲಿ. ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ಇವೆನ್ನೆಲ್ಲ ಕಿತ್ತು ಹಾಕುತ್ತೇವೆ. ನಮ್ಮ ಸರ್ಕಾರ ಬರುವುದು ಗ್ಯಾರಂಟಿ. ಅವೆಲ್ಲವನ್ನು ತೆಗೆದುಹಾಕುತ್ತೇವೆ ಎಂದರು.

ದುರಾಭಿಮಾನಿ ಸಮಾವೇಶ:

ಹಾಸನದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಅಲ್ಲ. ದುರಾಭಿಮಾನಿ ಸಮಾವೇಶ ಎಂದು ಟೀಕಿಸಿದ ಯತ್ನಾಳ, ಹಾಸನದಲ್ಲಿ ಸಮಾವೇಶ ನಡೆದ ವೇಳೆ ಎಲ್ಲ ಕಡೆ ಸಿದ್ದರಾಮಯ್ಯನ ಫೋಟೋನೇ ಇದ್ದವು. ಡಿ.ಕೆ. ಶಿವಕುಮಾರ ಫೋಟೋನೇ ಇರಲಿಲ್ಲ. ಅದನ್ನೆಲ್ಲ ನೋಡಿದರೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದಂತೆ ಇತ್ತು. ಈಗ ಡಿಕೆಶಿ ಏನು ಮಾಡುತ್ತಾರೆ ನೋಡಬೇಕು. ಸಿದ್ದು ಹಿಂದೆ ಬಂಡೆಯಂತೆ ನಿಲ್ಲುತ್ತೇನೆ ಎಂದು ಶಿವಕುಮಾರ ಹೇಳಿದ್ದರು. ಕನಕಪುರ ಬಂಡೆ ಹೇಗೆ ಒಡೆಯುತ್ತೀರೋ ಹಾಗೆ ಒಡೆಯುತ್ತೆ ಎಂದರು.

ಬೆಂಗಳೂರು ಫುಟ್‌ಫಾತ್‌ ಮೇಲೆ ಮೇಲೆ ಕನಕಪುರ ಬಂಡೆಯನ್ನು ಹಾಕಿರುತ್ತಾರೆ ಎಂದು ವ್ಯಂಗ್ಯವಾಡಿದರು.