ರೈತ ನಕ್ಕರೇ ಜಗವೇ ನಗುವುದು: ಮಠದ

| Published : Mar 30 2024, 12:47 AM IST

ಸಾರಾಂಶ

ಇಳಕಲ್ಲ: ರೈತ ನಕ್ಕರೆ ಜಗವೆಲ್ಲ ನಗುವುದು. ಅನ್ನ ಕೊಡುವ ರೈತ ನಗುವಂತೆ ನಾವು ಕೆಲಸ ಮಾಡಬೇಕು ಎಂದು ಇಳಕಲ್ಲ - ಹುನಗುಂದ ತಾಲೂಕು ಗೊಬ್ಬರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಮಠದ ತಿಳಿಸಿದರು.ಇಳಕಲ್ಲ ಪಟ್ಟಣದ ಫೋರ್‌ವೇಸ್ ಸಭಾಭವನದಲ್ಲಿ ನಡೆದ ನೈಟ್ರೋಫಾಲ್‌ ಕಂಪನಿ ಹಮ್ಮಿಕೊಂಡಿದ್ದ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಅನ್ನ ಬೆಳೆಯುವ ರೈತನಿಗೆ ಸರ್ಕಾರ ಕೊಡುವ ಸಹಾಯದ ಜೊತೆಗೆ ನಾವು ಕೂಡ ಆತನಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ರೈತ ನಕ್ಕರೆ ಜಗವೆಲ್ಲ ನಗುವುದು. ಅನ್ನ ಕೊಡುವ ರೈತ ನಗುವಂತೆ ನಾವು ಕೆಲಸ ಮಾಡಬೇಕು ಎಂದು ಇಳಕಲ್ಲ - ಹುನಗುಂದ ತಾಲೂಕು ಗೊಬ್ಬರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಮಠದ ತಿಳಿಸಿದರು.ಇಳಕಲ್ಲ ಪಟ್ಟಣದ ಫೋರ್‌ವೇಸ್ ಸಭಾಭವನದಲ್ಲಿ ನಡೆದ ನೈಟ್ರೋಫಾಲ್‌ ಕಂಪನಿ ಹಮ್ಮಿಕೊಂಡಿದ್ದ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಅನ್ನ ಬೆಳೆಯುವ ರೈತನಿಗೆ ಸರ್ಕಾರ ಕೊಡುವ ಸಹಾಯದ ಜೊತೆಗೆ ನಾವು ಕೂಡ ಆತನಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕಿದೆ. ರೈತರು ಉತ್ತಮ ಬೆಳೆ ಬೆಳೆಯುವಂತೆ ಮಾಡಬೇಕು. ಮೊದಲು ಬೆಳೆದ ಬೆಳೆಗಳಿಗೆ ಗುಣಮಟ್ಟದ ಔಷಧಗಳನ್ನು ಪೂರೈಕೆ ಮಾಡಿ ರೈತರು ನಗುವಂತೆ ಮಾಡುವುದೇ ನಮ್ಮ ಕಾಯಕ ಎಂದರು.

ನೈಟ್ರೋಫಾಲ್‌ ಕಂಪನಿ ಮುಖ್ಯಸ್ಥ ಬಸವರಾಜ ಅವಾರಿಗೌಡರ ಮಾತನಾಡಿ, ರೈತನ ಹಿತದೃಷ್ಟಿಯಿಂದಲೇ ಉತ್ತಮ ಗುಣಮಟ್ಟದ ಕೀಟನಾಶಕಗಳನ್ನು ತಯಾರಿಸುತ್ತಿದ್ದೇವೆ. ಅವುಗಳ ಬಳಕೆಯಿಂದ ರೈತನ ಮುಖದಲ್ಲಿ ಸದಾ ನಗು ಇರುತ್ತದೆ ಎಂದರು.

ಇದೇ ವೇಳೆ ಅವಳಿ ತಾಲೂಕಿನ ಗೊಬ್ಬರ ವ್ಯಾಪಾರಸ್ಥರು ಬಸವರಾಜ ಅವಾರಿಗೌಡರನ್ನು ಸಂಘದ ಪರವಾಗಿ ಗೌರವಿಸಿದರು. ಆನಂದ ಜಾಲಿಹಾಳ ಸ್ವಾಗತಿಸಿದರು. ಗುರು ಸಜ್ಜನ ಕಾರ್ಯಕ್ರಮ ನಿರೂಪಿಸಿದರು.