ಸಾರಾಂಶ
ಗುರುಮಠಕಲ್ ಸಮೀಪದ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ನಾವು ಪರಿಸರ ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ ಹೇಳಿದರು.ಸಮೀಪದ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಭೂಮಿ ಮೇಲೆ ಜೀವವಿರುವ ಪ್ರತಿಯೊಂದು ಜೀವ ರಾಶಿಗೆ ಆಹಾರಕ್ಕಿಂತ ಮೊದಲು ಗಾಳಿ ಅತ್ಯಗತ್ಯವಾಗಿ ಬೇಕು. ಇಂದಿನ ಸ್ಥಿತಿಗತಿಯನ್ನು ನೋಡುತ್ತಿದ್ದರೆ ಗಿಡಗಳ ಮಹತ್ವದ ಅರಿವು ಉಂಟಾಗುತ್ತದೆ. ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಈ ದಿನದ ಮಹತ್ವವನ್ನು ಪ್ರತಿಯೊಬ್ಬರು ತಿಳಿಯಬೇಕು. ಪ್ರತಿಯೊಬ್ಬರು ಪರಿಸರವನ್ನು ಉಳಿಸಿ, ಬೆಳೆಸುವಂತಹ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ. ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಶಿಕ್ಷಕರಾದ ರಾಚಯ್ಯ ಸ್ವಾಮಿ ಬಾಡಿಯಾಲ, ವಿಶ್ವನಾಥರೆಡ್ಡಿ ಪಾಟೀಲ್ ಕಣೇಕಲ್, ಉಪನ್ಯಾಸಕ ದೇವಿಂದ್ರ ಪೀರಾ, ಸತೀಶ ಪರ‍್ಮಾಂ, ಆನಂದ ಪಾಟೀಲ್ ಕೊಂಡಾಪುರ, ಶಿವಕುಮಾರ ಬಂಡಿ, ಭೀಮಣ್ಣ ನಾಯಕ, ಸಂಗಾರೆಡ್ಡಿ, ತೋಟೇಂದ್ರ, ಹೊನ್ನಪ್ಪ ಸಗರ, ರಾಚಪ್ಪ, ಸತೀಶ, ಶೋಭಾ, ದೇವಿಕಾ ಸೇರಿದಂತೆ ಇತರರಿದ್ದರು.