ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಾಣಾವರದ ನಾಗರಿಕರ ವೇದಿಕೆ ವತಿಯಿಂದ ಸರ್ಕಾರಿ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು.ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಸಿ. ಶ್ರೀನಿವಾಸ, ಹಿರಿಯ ನಾಗರಿಕರ ಎಲ್ಲರೂ ಸೇರಿ ಒಂದೆಡೆ ಕುಳಿತು ಚರ್ಚಿಸಿ ವೇದಿಕೆಯೊಂದನ್ನು ಪ್ರಾರಂಭಿಸಿರುವುದು ಹಾಗೂ ಸರ್ಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿರುವುದು ಉತ್ತಮವಾದ್ದು, ಹಿರಿಯ ನಾಗರಿಕರ ಈ ಒಂದು ಸೇವೆ ಯುವ ಜನರಿಗೆ ಉತ್ತೇಜನವಾಗಿದೆ ಎಂದು ತಿಳಿಸಿದರು.
ನಮ್ಮ ಗ್ರಾಮ ಹಾಗೂ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ನೈರ್ಮಲ್ಯವನ್ನು ತಡೆಗಟ್ಟುವುದರ ಜೊತೆಗೆ ನಗರವನ್ನು ಸ್ವಚ್ಛವಾಗಿ ಇಡುವುದಲ್ಲದೆ ನಗರದ ಸ್ವಾಸ್ಥ್ಯದಿಂದಲೂ ಇಟ್ಟುಕೊಳ್ಳಬಹುದು. ನಗರವು ಸುಂದರವಾಗಿ ಕಾಣುವುದರ ಜೊತೆಗೆ ಆರೋಗ್ಯವಾಗಿರುತ್ತದೆ ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಅಶೋಕ್ ಮಾತನಾಡಿ, ಬಾಣಾವರ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿರುವಂತಹ ನಗರವಾಗಿದ್ದು, ಇಲ್ಲಿ ಅಪಘಾತಗಳು ನಡೆಯುವುದು ಸಾಮಾನ್ಯವಾಗಿರುವುದಲ್ಲದೆ ಸರ್ಕಾರಿ ಆಸ್ಪತ್ರೆಗೆ ಹೊಂದಿಕೊಂಡಂತೆ ಸಹಸ್ರಾರು ನಾಗರಿಕರಿದ್ದು, ಇವರ ಶ್ರೇಯೋಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸರ್ಕಾರಿ ಆಸ್ಪತ್ರೆಯನ್ನು ಸಂಬಂಧಪಟ್ಟ ಶಾಸಕರು ಹಾಗೂ ಇಲಾಖೆ ಹಾಗೂ ಸಚಿವಾಲಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಾಡು ಮಾಡಬೇಕಾಗಿದೆ ಎಂದು ತಿಳಿಸಿದರು.
ಆರೋಗ್ಯ ಅಧಿಕಾರಿ ರಂಗನಾಥ್ ಮಾತನಾಡಿ, ಸ್ವಚ್ಛತೆಗಿಂತ ಹೆಚ್ಚಿನ ಪುಣ್ಯ ಮತ್ತೊಂದಿಲ್ಲ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಆರೋಗ್ಯವಿರುತ್ತದೆ. ಆರೋಗ್ಯವಿದ್ದ ಕಡೆ ಸಮಾಜ ಉತ್ತಮವಾಗಿರುತ್ತದೆ, ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಸಹ ಸ್ವಚ್ಛತೆಯ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು. ಅಲ್ಲದೆ ತಮ್ಮ ತಮ್ಮ ನಗರಗಳು, ವಾರ್ಡ್ಗಳು, ಮನೆಯ ಮುಂಭಾಗದಲ್ಲಿ ಕಸಗಳು ಶೇಖರಣೆ ಆಗದ ಹಾಗೆ ನೋಡಿಕೊಳ್ಳಬೇಕು. ಜೊತೆ ಜೊತೆಗೆ ಗ್ರಾಮದ ನಾಗರಿಕರ ಹಿತದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಹ ಸ್ವಚ್ಛತೆಯ ಕಡೆ ಗಮನ ಕೊಡಬೇಕು ಎಂದು ತಿಳಿಸಿದರುತಾಪಂ ಮಾಜಿ ಸದಸ್ಯರಾದ ಬಿ. ರವಿಶಂಕರ್, ಬಿ. ಆರ್. ಜಯಣ್ಣ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ ಜಯಣ್ಣ, ಕರವೇ ಗೌರವಾಧ್ಯಕ್ಷೆ ಲಕ್ಷ್ಮೀ ಮಾತನಾಡಿದರು.
ಸಮಾರಂಭದಲ್ಲಿ ನಿವೃತ್ತ ಯೋಧರಾದ ಚಂದ್ರು, ಮಂಜುನಾಥ್, ಮೈಲಾರಪ್ಪ, ಬಾಣಾವರ ಠಾಣೆಯ ಪಿಎಸ್ಐ ಸುರೇಶ್ ,ನಿವೃತ್ತ ಪಿಡಿಒ ಪರಮೇಶ್, ನಿವೃತ್ತ ಅಗ್ನಿಶಾಮಕ ಅಧಿಕಾರಿ ಬಸವರಾಜ್, ಬಾಣಾವರ ವೈದ್ಯಾಧಿಕಾರಿ ರಂಗನಾಥ್, ಪತ್ರಿಕ ವರದಿಗಾರ ಸಾಧಿಕ್ ಅವರಿಗೆ ಸನ್ಮಾನಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀಣಾ ವಿಶ್ವನಾಥ್, ಸದಸ್ಯರಾದ ಸುರೇಶ್, ಆಸಿಫ್, ವೀಣಾ ಸುರೇಶ್, ಹಿರಿಯ ನಾಗರಿಕ ವೇದಿಕೆಯ ಸದಸ್ಯರಾದ ಕೆ ಸಿ ಖಾದರ್ ಭಾಷಾ, ಶಫಿ ಅಹಮದ್ ಸಾಬ್, ಇಲಿಯಾಸ್ ಸಾಬ್, ವೆಂಕಟೇಶ್ ಲಾಡ್, ಸತೀಶ್ ಬಾಬು, ಮುಸ್ಲಿಂ ಸಮಾಜದ ಅಧ್ಯಕ್ಷರ ಹಿಂಸಾಬ್ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಬಾಣವರ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.