ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು: ನಟಿ ಶಿಲ್ಪಾ ಶೆಟ್ಟಿ

| Published : Apr 27 2024, 01:15 AM IST / Updated: Apr 27 2024, 02:16 PM IST

ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು: ನಟಿ ಶಿಲ್ಪಾ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು.

 ಮೂಲ್ಕಿ :  ಶಿಬರೂರು ಕ್ಷೇತ್ರದ ದೈವ ಕೊಡಮಣಿತ್ತಾಯನ ಅನುಗ್ರಹದಂತೆ ನಾನಿಲ್ಲಿ ಬಂದಿದ್ದೇನೆ. ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು ಅನ್ನೋದು ನನಗೆ ಹೆಮ್ಮೆ. ಮುಂದೆ ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತೇನೆ ಎಂದು ಖ್ಯಾತ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಪ್ರಯುಕ್ತ ಜರುಗಿದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಆಶೀರ್ವಚನ ನೀಡಿದ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರು, ಅತಿ ಕಡಿಮೆ ಅವಧಿಯಲ್ಲಿ ಬಂಗಾರದ ಪಲ್ಲಕ್ಕಿ, ದ್ವಾರ, ಗೋಪುರ ಸಹಿತ ಬ್ರಹ್ಮಕುಂಭಾಭಿಷೇಕ ನಡೆದು ನಾಗಮಂಡಲ ನಡೆಯುತ್ತಿದೆ. ಇದೆಲ್ಲವೂ ದೈವದ ಪವಾಡದಿಂದಷ್ಟೇ ಸಾಧ್ಯ ಎಂದರು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಗ್ರಿ ಗೋಪಾಲಕೃಷ್ಣ ಸಾಮಗ, ಜಾನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಮಾತನಾಡಿದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ, ಹರಿನಾರಾಯಣ ದಾಸ ಅಸ್ರಣ್ಣ, ಸುನಂದಾ ಶೆಟ್ಟಿ, ಅಡು ಶಂಕರ ಶೆಟ್ಟಿ, ಹೇರಂಭ ಕೆಮಿಕಲ್ ಇಂಡಸ್ಟ್ರಿಸ್ ಮಾಲಕ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ ಭಂಡಾರಮನೆ, ವಾಮಯ್ಯ ಬಿ.ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಹರೀಶ್ ಕೇಶವ ಶೆಟ್ಟಿ, ಡಾ. ಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ, ಅನುಸೂಯ, ಶ್ಯಾಮಲಾ, ಬ್ರಹ್ಮಕುಂಭಾಭಿಷೇಕ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೋಂಜಾಲುಗುತ್ತು, ರಾಮಚಂದ್ರ ಶೆಟ್ಟಿ ಸೂರತ್, ಶಾಸಕ ಉಮಾನಾಥ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತೀಕ್ಷಾ ಪ್ರದ್ಯುಮ್ನ ರಾವ್ ಪ್ರಾರ್ಥಿಸಿದರು. ಸಮಿತಿ ಕಾರ್ಯಧ್ಯಕ್ಷ ಪ್ರದ್ಯುಮ್ನ ರಾವ್ ಸ್ವಾಗತಿಸಿದರು.ಸಮಿತಿಯ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಕೊರ್ಯಾರು ಪ್ರಸ್ತಾವನೆಗ್ಯೆದರು.ವಿಜೇಶ್ ಶೆಟ್ಟಿ ವಂದಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಚಿತ್ರ:26 ಮೇಲ್‌ ಮಾಡುತ್ತೇನೆ