ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ. ಎಂತಹದೇ ಪ್ರವಾಹ ಪರಿಸ್ಥಿತಿ ಉಂಟಾದರೂ ಸರ್ಕಾರ ಹಿಂದೆ ಸರಿಯಲ್ಲ, ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ, ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವಿವರಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ. ಎಂತಹದೇ ಪ್ರವಾಹ ಪರಿಸ್ಥಿತಿ ಉಂಟಾದರೂ ಸರ್ಕಾರ ಹಿಂದೆ ಸರಿಯಲ್ಲ, ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ, ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವಿವರಿಸಿದರು.ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಲು ಶನಿವಾರ ಜಮಖಂಡಿಗೆ ಆಗಮಿಸಿದ್ದ ಅವರು ಜಿಕ್ಕಪಡಸಲಗಿಯ ಶ್ರಮಬಿಂದು ಸಾಗರವನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿ, ನದಿ ದಡದಲ್ಲಿ ವಾಸಿಸುವ ಕುಟುಂಬಗಳು ಜಾನುವಾರುಗಳ ಮೇವು, ಉಳಿದು ಕೊಳ್ಳಲು ಸ್ಥಳ, ಜಾನುವಾರುಗಳಿಗೆ ಸ್ಥಳವಿಲ್ಲ ಎಂದೆಲ್ಲ ನೆಪಹೇಳಿ ಸ್ಥಳಾಂತರವಾಗಿಲ್ಲ. ಅಂಥ ಕುಟುಂಬಗಳಿಗೆ ತಮ್ಮ ವಾಸಸ್ಥಳ ಬಿಟ್ಟು ಹೋಗಲು ಮನಸ್ಸು ಇಲ್ಲ. ಆದ್ದರಿಂದ ತಾಲೂಕು ಆಡಳಿತ ಮನವರಿಕೆ ಮಾಡಿ ಸ್ಥಳಾಂತರಿಸುವ ಕೆಲಸಮಾಡುತ್ತಿದೆ ಎಂದರು.
ತಾವು ವಾಸಿಸುವ ಸ್ಥಳದ ಸಂಬಂಧದಿಂದ ಸ್ಥಳ ಬಿಡಲಾಗದೇ ರೈತರ ಸ್ಥಳಾಂತರ ವಿಳಂಬವಾಗುತ್ತಿದೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಸ್ಥಳಾಂತರಕ್ಕೆ ಕ್ರಮ ಜರುಗಿಸಬೇಕಾಗುತ್ತದೆ ಎಂದರು. ಪುನರ್ವಸತಿ ಕೇಂದ್ರಗಳಿಗೆ ಕೇವಲ ಶೇ.40 ರಷ್ಟು ಕುಟುಂಬಗಳು ಸ್ಥಳಾಂತರವಾಗಿವೆ. ಆದರೂ ಉಳಿದವರು ಮನಸ್ಸು ಮಾಡುತ್ತಿಲ್ಲ, ರೈತರ ಮೇಲೆ ಒತ್ತಡ ಹೇರಲು ಆಗುತ್ತಿಲ್ಲ. ಅಸಹಾಯಕ ಪರಿಸ್ಥಿತಿ ಉಂಟಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇದು ಸಾಮಾನ್ಯ ಎಂದರು.