ಮದ್ಯದ ಮೇಲೆ ವೆಚ್ಚ: ತೆಲಂಗಾಣ ನಂ.1, ಆಂಧ್ರ ನಂ.2

| Published : Sep 02 2024, 02:04 AM IST

ಸಾರಾಂಶ

ಮದ್ಯದ ಮೇಲೆ ಅತಿ ಹೆಚ್ಚು ಖರ್ಚು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ 2ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ 11ನೇ ಸ್ಥಾನದಲ್ಲಿದೆ.

ಹೈದರಾಬಾದ್‌: ಮದ್ಯದ ಮೇಲೆ ಅತಿ ಹೆಚ್ಚು ಖರ್ಚು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ 2ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ 11ನೇ ಸ್ಥಾನದಲ್ಲಿದೆ.

ಸ್ವಾಯತ್ತ ಸಂಶೋಧನಾ ಸಂಸ್ಥೆಯಾದ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ’ (ಎನ್‌ಐಪಿಎಫ್‌ಪಿ) ಅಧ್ಯಯನದದಲ್ಲಿ ಈ ಅಂಶ ಹೊರಬಿದ್ದಿದೆ. ತೆಲಂಗಾಣದ ಜನರು ವರ್ಷಕ್ಕೆ ಕುಡಿತಕ್ಕೆಂದು ಸರಾಸರಿ 1623 ರು. ಖರ್ಚು ಮಾಡುತ್ತಾರೆ ಹಾಗೂ ಆಂಧ್ರಪ್ರದೇಶದ ಜನರು 1306 ರು. ಖರ್ಚು ಮಾಡುತ್ತಾರೆ. 3ನೇ ಸ್ಥಾನದಲ್ಲಿ ಪಂಜಾಬ್‌ (1245 ರು.) ಇದೆ ಹಾಗೂ 11ನೇ ಸ್ಥಾನದಲ್ಲಿರುವ ಕರ್ನಾಟಕದ ಜನರು ವರ್ಷಕ್ಕೆ ಮಾಡುವ ಸರಾಸರಿ ಮದ್ಯದ ಖರ್ಚು 374 ರು. ಮಾತ್ರ.ರಾಜ್ಯದಲ್ಲಿ ಎಷ್ಟು ಮದ್ಯ ಮಾರಾಟವಾಗಿದೆ ಎಂಬುದನ್ನು ಆಯಾ ರಾಜ್ಯದ ಜನಸಂಖ್ಯೆಗೆ ಭಾಗಿಸಿ ಮದ್ಯಸೇವನೆಯ ಸರಾಸರಿ ಲೆಕ್ಕ ತೆಗೆಯಲಾಗುತ್ತದೆ.