ಸಾರಾಂಶ
ಶನಿವಾರದಿಂದ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಭಾನವಾರ ಬೆಳಗ್ಗೆ ಪದೇ ಪದೇ ಭಾರೀ ಮಳೆ ಸುರಿದಿದೆ. ಈ ಕಾರಣಕ್ಕೆ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ.
ಉಪ್ಪಿನಂಗಡಿ : ಗೊಳಿತೊಟ್ಟು ಭಾಗದ ಕೊಡಿಂಗೇರಿ ಹಾಗೂ ಕೊಕ್ಕಡ ಗ್ರಾಮದ ಹಾರ, ಮಡೆಜೋಡಿ, ಪಿಜಿನಡ್ಕ ಮೊದಲಾದ ಕಡೆಗಳಲ್ಲಿ ಭಾನುವಾರ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಹಲವು ಮನೆಗಳ ಛಾವಣಿ ಕಿತ್ತೆಸೆಯಲ್ಪಟ್ಟ ಹಾಗೂ ಕೃಷಿ ಬೆಳೆಗಳು ಹಾನಿಗೀಡಾದ ಘಟನೆ ಬಗ್ಗೆ ವರದಿಯಾಗಿದೆ.
ಮಡೆಜೋಡಿ ಸಮೀಪದ ಲಿಯೋ ಡಿಸೋಜಾ, ಜಬ್ಬಾರ್ ಹಾಗೂ ಅವರ ಪಕ್ಕದ ಕೃಷಿ ತೋಟಗಳಲ್ಲಿ ನೂರಕ್ಕೂ ಅಧಿಕ ಅಡಕೆ ಮರಗಳು, ಕೊಕ್ಕಡ ಭಾಗದ ಕೊಡಿಂಗೇರಿಯ ಅಣ್ಣುಗೌಡ, ಶಶಿ, ಕೊಕ್ಕಡ ಗ್ರಾ.ಪಂ ಸದಸ್ಯೆ ಲತಾ, ಹಾರ ಬಾಲಪ್ಪ ಗೌಡ ಅವರಿಗೆ ಸೇರಿದ ಅಡಕೆ ಮರಗಳು. ಪಿಜಿನಡ್ಕ ಕಾಲೋನಿ ನಿವಾಸಿ ಬಾಬಿ ಹಾಗೂ ಅವರ ಸಮೀಪದ ಕೆಲವು ಮನೆಗಳ ಮೇಲ್ಛಾವಣಿ ಬಿರುಗಾಳಿಗೆ ಹಾರಿ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆ. ಕೊಕ್ಕಡ ಕಂದಾಯ ಇಲಾಖೆ ಹಾಗೂ ಕೊಕ್ಕಡ ಪಂಚಾಯಿತಿನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರದಿಂದ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಭಾನವಾರ ಬೆಳಗ್ಗೆ ಪದೇ ಪದೇ ಭಾರೀ ಮಳೆ ಸುರಿದಿದೆ. ಈ ಕಾರಣಕ್ಕೆ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ. ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆಮಂಗಳೂರು: ಕಳೆದ ಹಲವು ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮಳೆ ವಾತಾವರಣ ಕಂಡುಬಂದಿದೆ. ಕೆಲಹೊತ್ತು ಬಿಸಿಲು ಇದ್ದರೂ ದಿನವಿಡಿ ಆಗಾಗ ಉತ್ತಮ ಮಳೆ ಸುರಿದಿದೆ.ಬೆಳಗ್ಗಿನಿಂದಲೇ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ಕಳೆದ ಒಂದೆರಡು ವಾರಗಳಿಂದ ಸಾಕಷ್ಟು ಮಳೆಯಾಗದೆ ಇದ್ದುದರಿಂದ ಬತ್ತ ಬೆಳೆಗೆ ಸಮಸ್ಯೆಯಾಗಿತ್ತು. ಶನಿವಾರ ಮತ್ತು ಭಾನುವಾರ ಸಾಕಷ್ಟು ಮಳೆ ಸುರಿದಿದ್ದರಿಂದ ಮಳೆಯಾಶ್ರಿತ ಬತ್ತ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಸಂಜೆ ವೇಳೆ ಗ್ರಾಮಾಂತರ ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿದಿದೆ.ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 20.2 ಮಿಮೀ ಮಳೆ ದಾಖಲಾಗಿದೆ.