ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಶೋಕ್‌ ಯಾರು

| Published : Jul 04 2025, 11:46 PM IST / Updated: Jul 04 2025, 11:47 PM IST

ಸಾರಾಂಶ

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಚಾರದ ಬಗ್ಗೆ ನವೆಂಬರ್ ನಂತರದಲ್ಲಿ ಪ್ರತಿಕ್ರಿಯೆ ಕೊಡಲಾಗುವುದು. ಅದರ ಬಗ್ಗೆ ಮಾತನಾಡಲು ಆರ್‌. ಅಶೋಕ್ ಯಾರು ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್‌ ತಿರುಗೇಟು ನೀಡಿದರು. ನಮ್ಮ ಹೈಕಮಾಂಡ್ ಇದೆ, ಅವರು ತೀರ್ಮಾನ ಮಾಡುತ್ತಾರೆ, ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಶೋಕ್ ಯಾರು ಎಂದು ಕುಟುಕಿದರು. ಯಾರೋ ಹೇಳಿದರು ಅಂದಮಾತ್ರಕ್ಕೆ ಸಿಎಂ ಬದಲಾಗುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು. ಅಶೋಕ್ ಅವರು ನವೆಂಬರ್‌ವರೆಗೆ ಗಡುವು ನೀಡಿದ್ದಾರೆ. ಆಗ ಏನಾಗುತ್ತೆ ನೋಡಿ, ನಂತರ ನಾನು ಮಾತನಾಡುವೆ ಎಂದು ಟಾಂಗ್ ಕೊಟ್ಟರು.

ಹಾಸನ: ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಚಾರದ ಬಗ್ಗೆ ನವೆಂಬರ್ ನಂತರದಲ್ಲಿ ಪ್ರತಿಕ್ರಿಯೆ ಕೊಡಲಾಗುವುದು. ಅದರ ಬಗ್ಗೆ ಮಾತನಾಡಲು ಆರ್‌. ಅಶೋಕ್ ಯಾರು ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್‌ ತಿರುಗೇಟು ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭೆ ಮುಗಿದ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗಲಿದ್ದಾರೆ ಎಂಬ ವಿಪಕ್ಷ ನಾಯಕ ಅಶೋಕ್ ಹಾಗೂ ಜೆಡಿಎಸ್ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ ಸಚಿವರು, ಸಿಎಂ ಹುದ್ದೆ ಖಾಲಿ ಇಲ್ಲ, ಅವರು ಹೇಳಿದ ತಕ್ಷಣ ಆಗುತ್ತಾ ಎಂದು ನಗುತ್ತಲೇ ಕೇಳಿದರು. ಆ ಬಗ್ಗೆ ನವೆಂಬರ್ ಬಳಿಕ ಪ್ರತಿಕ್ರಿಯಿಸುವೆ. ನಮ್ಮ ಹೈಕಮಾಂಡ್ ಇದೆ, ಅವರು ತೀರ್ಮಾನ ಮಾಡುತ್ತಾರೆ, ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಶೋಕ್ ಯಾರು ಎಂದು ಕುಟುಕಿದರು. ಯಾರೋ ಹೇಳಿದರು ಅಂದಮಾತ್ರಕ್ಕೆ ಸಿಎಂ ಬದಲಾಗುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು. ಅಶೋಕ್ ಅವರು ನವೆಂಬರ್‌ವರೆಗೆ ಗಡುವು ನೀಡಿದ್ದಾರೆ. ಆಗ ಏನಾಗುತ್ತೆ ನೋಡಿ, ನಂತರ ನಾನು ಮಾತನಾಡುವೆ ಎಂದು ಟಾಂಗ್ ಕೊಟ್ಟರು.