ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನಮಗೆ ಏನೆಲ್ಲಾ ಕೊಟ್ಟಿದೆ ಆಳುವವರನ್ನು, ಆಡಳಿತವನ್ನು, ಜನಪ್ರತಿನಿಧಿಗಳನ್ನು, ಸಾರ್ವಜನಿಕ ಸೇವಕರನ್ನು ಪ್ರಶ್ನಿಸುವ , ಬದಲಿಸುವ ಅವಕಾಶವಿದ್ದರೂ ಕೂಡ ಧ್ವನಿ ಎತ್ತುತ್ತಿಲ್ಲ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ರಕ್ಷಣಾ ಸಮಿತಿ ರಚನಾ ಸಭೆಯಲ್ಲಿ ಮಾತನಾಡಿ, ಜನರಿಗೆ ಸಂವಿಧಾನ ಮತ್ತು ಪ್ರಜಾಶಕ್ತಿಯ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಇಂತಹ ಸಂಘಟನೆಯಲ್ಲಿ ಸೇರಿಕೊಂಡು ಸಂವಿಧಾನ ರಕ್ಷಣೆ ಹಾಗೂ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಆದ್ದರಿಂದ ಸಂವಿಧಾನ ಸಂರಕ್ಷಣಾ ಪಡೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಸಂಘಟನೆ ಮಾಡಬೇಕಾಗುತ್ತದೆ. ತಾಲೂಕು ಮಟ್ಟದ ಸಮಿತಿಗೆ ಹೋಬಳಿ ಮಟ್ಟದಿಂದ ಅಸಕ್ತ ಯುವಜನರನ್ನು ಆಯ್ಕೆ ಮಾಡಬೇಕು ಎಂದರು.ಜಿಲ್ಲಾ ಸಂಚಾಲಕಿ ಎನ್ ಇಂದ್ರಮ್ಮ ಮಾತನಾಡಿ, ಕರ್ನಾಟಕದ ಜನಶಕ್ತಿ ನಾಡಿನಾದ್ಯಂತ ಜನ ಸಮುದಾಯಗಳ ಒಳಿತಿಗಾಗಿ ಶ್ರಮಿಸುತ್ತಿರುವ ಒಂದು ಸಾಮಾಜಿಕ ಸಂಘಟನೆ ಎದ್ದೇಳು ಕರ್ನಾಟಕ. ಸಮಾಜದಲ್ಲಿ ಇರುವಂತಹ ಹಲವು ಸಮಸ್ಯೆಗಳನ್ನು ಬಗೆಹರಿಸಲು ನೀಲಿ ಹಸಿರು ಕೆಂಪು ಸಂಘಟನೆಗಳು ಮುಂದಾದರೆ ಯಾವುದು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ದೇವನಹಳ್ಳಿ ರೈತರ ಹೋರಾಟ. ಯುವ ಜನರು ಮುಂದೆ ಬಂದರೆ ಸಂವಿಧಾನ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಇಡಿ ದೇಶಮಟ್ಟದ ಶಕ್ತಿಗಳು ಮುಷ್ಟಿಗಟ್ಟಿ ಪ್ರಬಲ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಹಾಗೂ ರಾಜಕೀಯ ಪ್ರತಿರೋದಕ್ಕೆ ಸಜ್ಜಾಗಬೇಕಾಗಿದೆ. ನಾಗರಿಕ ಸಮಾಜ ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವ ಮೂರನೇ ಪ್ರಬಲ ಧೃವವಾಗಿ ರೂಪಗೊಳ್ಳಬೇಕು ಎಂದರು.ಜಿಲ್ಲಾ ಸಂಚಾಲಕರಾದ ರಾಮಕೃಷ್ಣಪ್ಪ ಮಾತನಾಡಿ, ಸಂವಿಧಾನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರಲ್ಲಿಯೂ ಇಚ್ಛಾಶಕ್ತಿ ಇರಬೇಕು. ಅಂತವರು ಎದ್ದೇಳು ಕರ್ನಾಟಕ ಸಂಘಟನೆಯಲ್ಲಿ ಸೇರಿಕೊಂಡು ಅನ್ಯಾಯಗಳು ದೌರ್ಜನ್ಯಗಳು ಇವುಗಳ ವಿರುದ್ಧ ಧ್ವನಿಎತ್ತಬೇಕು. ಸಂವಿಧಾನ ರಕ್ಷಣಾ ಪಡೆಯಿಂದ ಆಗಸ್ಟ್ 15ರಂದು ಸೌಹಾರ್ದ ಜನ ಸ್ವತಂತ್ರೋತ್ಸವ ನಡೆಸಬೇಕು. ಇಚ್ಚಶಕ್ತಿ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅರಿವು ಇದ್ದವರು ಸಂಘಟನೆಯಲ್ಲಿ ಸೇರಿ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವುದನ್ನು ಬಳಸಿಕೊಳ್ಳಬೇಕು ಎಂದರು.ಸಭೆಯಲ್ಲಿ ದೀಪಿಕಾ ಮರಳೂರು, ಗಂಗಾಧರಸ್ವಾಮಿ, ಪ್ರವೇಣಿ, ಉಪನ್ಯಾಸಕಿ ಮರಿಯಾಂಬಿ, ಸಮಾಜ ಸೇವಕ ಬಿ.ಟಿ.ಗಿರೀಶ್ ಕುಮಾರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ಬಿ.ಜಯಣ್ಣ, ಕಾರ್ಯದರ್ಶಿ ಎನ್.ಆರ್ ರೇಣುಕಪ್ರಸಾದ್, ಖಜಾಂಚಿ ಅಪ್ಪಾಜಿ, ಬಿ.ರಾಮಯ್ಯ, ಬಿ.ಬಸವರಾಜು, ಕರಿಗಿರಿಯಪ್ಪ, ರಂಗಮ್ಮ, ಕೆಂಪರಾಜು, ಲೋಕೇಶ ಇತರರು ಇದ್ದರು.