Who will listen to the grievances of farmers who received less compensation?
-ತಿಂಗಳು ಕಳೆದರೂ ಬಾರದ ಬೆಳೆ ನಷ್ಟ ಪರಿಹಾರ । ಕಾಳಗಿ ಕಂದಾಯ ಇಲಾಖೆ, ಬೆಳೆ ಇನ್ಸೂರೆನ್ಸ್ ಕಂಪನಿಗೆ ರೈತರ ಹಿಡಿ ಶಾಪ
----•ನಾಗರಾಜ ಗದ್ದಿ ಕೊಡದೂರ
ಕನ್ನಡಪ್ರಭ ವಾರ್ತೆ ಕಾಳಗಿಮಳೆ ಬರದಿದ್ದರೆ ಬರಗಾಲ ಎನ್ನುವಂತೆ ಒಂದು ಬಾರಿ ತೊಗರಿ ಫಸಲು ಉತ್ತಮಾಗಿ ಬಂದರೆ ನಿಗದಿತವಾದ ಬೆಲೆ ಸಿಗುವುದಿಲ್ಲ, ಫಸಲು ಹಾಳಾದಾಗ ಬೆಲೆ ಉತ್ತಮವಾಗಿರುತ್ತದೆ. ಈ ಎರೆಡರ ಮಧ್ಯೆ ರೈತನ ಬದುಕು ಜೂಜಾಟದಂತಾಗಿದೆ. ಕಳೆದ ಬಾರಿ ರೈತರ ಖಾತೆಗೆ ಉತ್ತಮ ಪರಿಹಾರ ದೊರಕಿತು, ಆದರೆ, ಈ ಬಾರಿ ಒಂದು ಹೆಕ್ಟೇರ್‌ಗೆ ಕೇವಲ ೫ ಸಾವಿರ ಪರಿಹಾರ ನೀಡಿ ಸಣ್ಣ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಸರ್ಕಾರ ಹಾಗೂ ಕಾಳಗಿ ತಾಲೂಕು ಆಡಳಿತ ಮಾಡಿದೆ ಎಂದರೆ ಅತಿಶಯವಲ್ಲ.
ಒಂದು ತಿಂಗಳ ಹಿಂದಷ್ಟೇ ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ ಅವರು ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ತಹಸೀಲ್ದಾರ ಪೃಥ್ವಿರಾಜ್ ಪಾಟೀಲ ಅವರಿಗೆ ಸೂಚಿಸಿದ ಅವರು ಕಡಿಮೆ ಪರಿಹಾರ ಬಂದಿರುವ ರೈತರಿಗೆ ಸಂಪೂರ್ಣ ಪರಿಹಾರ ಒದಗಿಸುವಂತೆ ತಾಕೀತು ಮಾಡಿದ ಶಾಸಕರು, ಚಳಿಗಾಲ ಅಧಿವೇಶನ ಪ್ರಯುಕ್ತ ಅರ್ಧಕ್ಕೆ ಮೊಟುಕು ಗೊಳಿಸಿದ ಕೆಡಿಪಿ ಸಭೆ ಮುಂದಿನ ದಿನದಂದು ರೈತರ ಖಾತೆಗೆ ನಷ್ಟದ ಪರಿಹಾರ ಹಣ ಸಂಪೂರ್ಣ ಒದಗಿಸಬೇಕು ಎಂದು ಹೇಳಿದರು.ವಿಪರ್ಯಾಸವೆಂದರೆ ಒಂದು ತಿಂಗಳು ಕಳೆದರು ಇನ್ನೂ ಪರಿಹಾರ ಕಾಳಗಿ ರೈತರು ಕಂಡಿಲ್ಲ.
ಕಾಳಗಿ ತಾಲೂಕಿನಲ್ಲಿ ಒಟ್ಟು ೨೪೮೬೧ ಹೆಕ್ಟೇರ್ ಜಮೀನು ತೊಗರಿ ಬೆಳೆ-ಹಾನಿಯಾಗಿದ್ದು ೨೧.೪೩ ಕೋಟಿ ಪರಿಹಾರ ನಿಗದಿಯಾದರು ರೈತರ ಖಾತೆಗೆ ಎರಡು ಬಾರಿ ಹಣ ಬಿಡುಗಡೆ ಯಾದರು ಒಂದು ಬಾರಿಯಾದರು ಸಂಪೂರ್ಣ ಹೆಕ್ಟೇರ್ ೮೫೦೦ ಸಣ್ಣ ರೈತರ ಖಾತೆಗೆ ಸೇರಿಲ್ಲ. ಈ ಬಾರಿಯಾದರೂ ತೊಗರಿ ಬೆಳೆದು ಮಾಡಿದ ಸಾಲ ಸಾಲವನ್ನು ಪಾವತಿಸಲು ಮುಂದಾಗಿರುವ ರೈತ ಸಂಕುಲಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.ಲೋಪ: ಬೆಳೆ ನಷ್ಟ ನೋಂದಣಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಲೋಪ ವೆಸಗಿದ ಹಿನ್ನೆಲೆ ಕಡಿಮೆ ಪರಿಹಾರ ಬಂದಿದೆ ಎಂದು ಕೆಲ ರೈತರು ಗೋಳಾಡುತ್ತಿರುವುದು ಕಂಡುಬಂತು. ನಷ್ಟ ಪರಿಹಾರದಲ್ಲಿ ತಾರತಮ್ಯ ಒಂದಿಷ್ಟು ರೈತರಿಗೆ ಹೆಚ್ಚು ಒಂದಿಷ್ಟು ರೈತರಿಗೆ ಸಂಪೂರ್ಣ ಹಾಳಾದರೂ ಕಡಿಮೆ ನಷ್ಟವಾಗಿದೆ ಎಂದು ಕಂದಾಯ ಇಲಾಖೆಯ ಲಾಗಿನ್ ನಲ್ಲಿ ನೋಂದಣಿ ಮಾಡಿದ್ದಾರೆ. ಒಂದಿಷ್ಟು ವಿಐಗಳು ತಮಗೆ ಮನಬಂದಂತೆ ನೋಂದಣಿ ಮಾಡಿದ್ದಾರೆ. ಜಿಲ್ಲೆಗೆ ವರದಿ ಕಳಿಸುವ ಬರದಲ್ಲಿ ಬಡಪಾಯಿ ರೈತರಗೆ ತಹಸೀಲ್ದಾರ ತಲಾಟಿಗಳು ಅನ್ಯಾಯ ವೆಸಗಿದ್ದಾರೆ.
ರೋಗ ಬಾಧೆ: ಈ ಬಾರಿಗೆ ಅತಿವೃಷ್ಟಿಯಿಂದ ರೈತರ ತೊಗರಿ ಹಾಳಾದರೆ ಅಲ್ಪಸ್ವಲ್ಪ ಉಳಿದಿರುವ ತೊಗರಿ ಬೆಳೆಗೆ ಗೊಡ್ಡು ರೋಗಕ್ಕೆ ತುತ್ತಾಗಿ ರೈತನ ಬದುಕು ಬರ್ಬಾದ ಮಾಡಿದೆ. ಬೇರು ಕಾಂಡ ಹಂತಹಂತವಾಗಿ ಒಣಗುತ್ತಾ ಬರುತ್ತದೆ. ಇದರಿಂದ ರೈತನ ಕನಸು ಭಗ್ನಗೊಂಡಾಂತಾಗಿದೆ. ಕಳೆದ ಬಾರಿ ಚೆನ್ನಾಗಿ ಬಂದಿರುವ ಪರಿಹಾರ ಯಾಕೆ ಕಡಿಮೆ ಬಂದಿವೆ ಎಂದು ತಹಸೀಲ್ದಾರ ತಲಾಟಿಗಳವರಿಗೆ ರೈತರು ಪ್ರಶ್ನೆ ಮಾಡಿದರೆ ಮತ್ತೊಮ್ಮೆ ಜಿಲ್ಲೆಗೆ ನೋಂದಣಿ ಮಾಡಿ ಕಳಿಸಿದ್ದೇವೆ. ಪರಿಹಾರ ಬರುತ್ತವೆ ಎಂಬ ಒಂದೇ ಉತ್ತರ ಕಂದಾಯ ಇಲಾಖೆಯದಾಗಿದೆ.ಒಟ್ಟಾರೆ ಹೇಳುವುದಾದರೆ ಕಳೆದಬಾರಿ ಬಂದಿರುವಷ್ಟು ಪರಿಹಾರದ ಹಣ ಈ ಬಾರಿ ಬಂದಿಲ್ಲ. ಭಾಗಶಃ ರೈತರಿಗೆ ಅನ್ಯಾಯವಾಗಿದೆ.
ಸರ್ಕಾರ ನೀಡಿದರೂ ಕಂದಾಯ ಅಧಿಕಾರಿಗಳು ಪರಿಹಾರ ಹಾಕುವಲ್ಲಿ ದಾರಿತಪ್ಪಿದೆ ಎನಿಸುತ್ತಿದೆ. ತಹಸೀಲ್ದಾರರು ಕೆಡಿಪಿ ಸಭೆಯಲ್ಲಿ ಶಾಸಕರಿಗೆ ಭರವಸೆ ನೀಡಿದಂತೆ ಕೆಡಿಪಿ ತಕ್ಷಣವೇ ಪರಿಹಾರ ಹಣ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕಾಳಗಿ ತಾಲೂಕು ರೈತ ಸಂಕುಲ ಆಗ್ರಹಿಸಿದ್ದಾರೆ.ಪೋಟೊ: ಕಾಳಗಿ ತಾಲೂಕಿನ ಕೊಡದೂರ ಗ್ರಾಮದ ಜಮಿನೊಂದರಲ್ಲಿ ತೊಗರಿ ಬೆಳೆ ಸಂಪೂರ್ಣ ಗೊಡ್ಡು ರೋಗಕ್ಕೆ ತುತ್ತಾಗಿ ಸಂಪೂರ್ಣ ಹಾಳಾಗಿರುವುದು.