ಯಾರೇ ತಪ್ಪೆಸಗಿದ್ದರೂ ಕಾನೂನು ಕ್ರಮ ಆಗಲಿ

| Published : May 08 2024, 01:03 AM IST

ಯಾರೇ ತಪ್ಪೆಸಗಿದ್ದರೂ ಕಾನೂನು ಕ್ರಮ ಆಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಸ್ತ್ರೀಯರಿಗೆ ಗೌರವ ಸ್ಥಾನಮಾನವಿದ್ದು, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗಿದ್ದರೆ ಕಾನೂನು ಕ್ರಮ ಆಗಲಿ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.

ಹೊಸಕೋಟೆ: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಸ್ತ್ರೀಯರಿಗೆ ಗೌರವ ಸ್ಥಾನಮಾನವಿದ್ದು, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗಿದ್ದರೆ ಕಾನೂನು ಕ್ರಮ ಆಗಲಿ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗಬೇಕು. ಎಲ್ಲಿಯೂ ಅವರಿಗೆ ಅನ್ಯಾಯ ಆಗಬಾರದು. ಈಗಾಗಲೆ ಪ್ರಜ್ವಲ್ ರೇವಣ್ಣ ವಿಚಾರವಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ರೇವಣ್ಣನವರ ಬಂಧನ ಆಗಿದೆ. ನೆಲದ ಕಾನೂನು ಎಲ್ಲರಿಗೂ ಒಂದೇ. ಆದ್ದರಿಂದ ಎಸ್‌ಐಟಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೊಡಿಸುತ್ತದೆ ಎಂದರು.

ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ ಪಾತ್ರವಿಲ್ಲ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಚಾರವಾಗಿ ವಿನಾಕಾರಣ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ಬೆರಳು ತೋರಿಸುವುದು ಸರಿಯಲ್ಲ. ರಾಜ್ಯದಲ್ಲಿ ನಿಮ್ಮದೆ ಸರ್ಕಾರ ಇದೆ. ನಿಮ್ಮದೆ ಪೊಲೀಸ್ ಇದೆ, ಗುಪ್ತಚರ ಇಲಾಖೆ ಇದೆ. ಎಲ್ಲವೂ ಇದ್ದು ಏಕೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗುವಂತೆ ಮಾಡಿದ್ರಿ. ಏಕೆ ನಿಮಗೆ ಮಾಹಿತಿ ಇರಲಿಲ್ವಾ? ಆದ್ದರಿಂದ ಸುಖಾಸುಮ್ಮನೆ ಕೇಂದ್ರದ ಬಿಜೆಪಿ ನಾಯಕರ ಕಡೆ ಬೆರಳು ತೋರಿಸುವುದನ್ನು ಬಿಡಿ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ:

ಗ್ಯಾರಂಟಿ ವಾರಂಟಿ ಕಾರ್ಡ್‌ಗಳ ಮೂಲಕ ರಾಜ್ಯದಲ್ಲಿ ೧೩೪ ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಪ್ರಮುಖವಾಗಿ ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಸಹ ಸಮಾಧಾನವಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ದರಿಂದ ರಾಜ್ಯ ರಾಜಕಾರಣದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ನಂತರ ಏನು ಬೇಕಾದರೂ ಬದಲಾವಣೆ ಆಗಬಹುದು. ಪ್ರಸ್ತುತ ರಾಜಕಾರಣದಲ್ಲಿ ಯವುದೇ ತತ್ವ ಸಿದ್ದಾಂತ ಇಲ್ಲ. ಎಲ್ಲವೂ ಸ್ವಾರ್ಥದಿಂದ ಕೂಡಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.ಬಾಕ್ಸ್...............

ನಕಲಿ ಮತದಾನ: ಚುನಾವಣಾ ಆಯೋಗಕ್ಕೆ ದೂರು

ಏಪ್ರಿಲ್ ೨೬ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೊಬಳಿಯ ಬೆಂಡಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಶಾಸಕ ಶರತ್ ಬೆಂಬಲಿಗರು ನಕಲಿ ಮತದಾನ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಬಿಜೆಪಿ ಏಜೆಂಟ್ ಆಗಿದ್ದ ಗಣೇಶ್ ಆರಾಧ್ಯ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಅವರ ಕಾರಿನ ಟಯರ್ ಕತ್ತರಿಸಿ, ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ. ಇದನ್ನು ಅರಿತ ಚುನಾವಣಾ ಹಾಗೂ ಪೊಲೀಸ್ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಮನೆಗೆ ಕಳುಹಿಸಿದ್ದಾರೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದ್ದು, ಮತಗಟ್ಟೆಯಲ್ಲಿ ನಡೆದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ದರಿಂದ ಈ ವಿಚಾರವಾಗಿ ಮುಖ್ಯ ಚುನಾವಣಾಧಿಕಾರಿ ಹಾಗೂ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿದ್ದೇವೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಎಂಟಿಬಿ ನಾಗರಾಜ್ ಒತ್ತಾಯಿಸಿದರು.(ಫೋಟೋ ಸಣ್ಣದಾಗಿ ಬಳಸಿ)

ಫೋಟೋ: 7 ಹೆಚ್‌ಎಸ್‌ಕೆ 3

ಹೊಸಕೋಟೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.