ಸಾರಾಂಶ
ಮೈಸೂರು: ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ನಡುವೆ ಉತ್ತಮ ಸಂಬಂಧವಿದೆ. ಇಬ್ಬರ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯ ಏನಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಏನಾದರೂ ಮಾತನಾಡಿಕೊಳ್ಳಲಿ. ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಿನ್ನೆ ನಾನೂ ಹಾಸನದಲ್ಲಿದ್ದೆ. ಸುಮಾರು 2 ಗಂಟೆ ಪ್ರಜ್ವಲ್ ಜೊತೆ ಮಾತನಾಡಿದೆ. ನನ್ನೊಂದಿಗೆ ಯಾವುದೇ ದೂರು ಹೇಳಲಿಲ್ಲ. ನನ್ನ ಉಪಸ್ಥಿತಿಯಲ್ಲೇ ಸುದ್ದಿಗೋಷ್ಠಿ ಕೂಡ ಮಾಡಿದ್ರು. ಇಬ್ಬರ ನಡುವೆ ಗೊಂದಲ ಇದೆ ಅಂತ ನನಗೆ ಅನ್ನಿಸುತ್ತಿಲ್ಲ. ಯಾಕೆ ಏನೋ ಆಗಿದೆ ಅನ್ನುವ ರೀತಿ ಭಾವಿಸುತ್ತೀರಿ ಎಂದರು.ಹಾಸನದಲ್ಲಿ ಪ್ರೀತಂಗೌಡ ಸೋತಿದ್ದರೂ ಪವರ್‌ಫುಲ್ ಲೀಡರ್. ಅವರಿಗೆ ಹಾಸನ ಒಗ್ಗೂಡಿಸಲು ಒಂದು ದಿನ ಸಾಕು. ಈಗಾಗಲೇ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಪಕ್ಷ ಹೇಳಿದ ಕಡೆ ನಾನು ಹೋಗುತ್ತೇನೆ: ಪ್ರೀತಂನನ್ನನ್ನು ಕಾಶ್ಮೀರಕ್ಕೆ ಹೋಗು ಅಂದ್ರೆ ಹೋಗ್ತಿನಿ. ಕನ್ಯಾಕುಮಾರಿಗೆ ಹೋಗು ಅಂದ್ರು ಹೋಗ್ತಿನಿ. ಪಕ್ಷ ಹೇಳಿದ ಕಡೆ ಹೋಗುತ್ತೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಕಾರ್ಯದರ್ಶಿ. ಅದಕ್ಕಾಗಿ ಮೈಸೂರಿಗೆ ಬಂದಿದ್ದೇನೆ. ಮೈಸೂರು, ಚಾಮರಾಜನಗರ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಸದಾನಂದಗೌಡರು ಹಾಸನಕ್ಕೆ ಹೋಗಿದ್ರು. ಯಾಕೆ ಹಾಸನಕ್ಕೆ ಹೋಗಿದ್ರಿ ಅಂತ ಕೇಳೋಕೆ ಆಗುತ್ತಾ. ನಾನು ಪಕ್ಷ ಹೇಳಿದ ಕಡೆ ಹೋಗುತ್ತೇನೆ ಎಂದರು.ಪ್ರಜ್ವಲ್ ರೇವಣ್ಣ ಭೇಟಿ ವಿಚಾರ ಗೊತ್ತಿಲ್ಲ, ನನಗೆ ಮಾಹಿತಿ ಇಲ್ಲ. ಎನ್.ಡಿ.ಎ ಅಭ್ಯರ್ಥಿ ಗೆಲ್ಲಬೇಕು. ಪ್ರೀತಂ ಗೌಡ ಮುಖ ನೋಡಿ ವೋಟು ಹಾಕಲ್ಲ. ನಮ್ಮ ಮನೆಯಲ್ಲೂ ಮೋದಿ ಮುಖ ನೋಡಿ ಮತ ಹಾಕುತ್ತಾರೆ. ಇದು ಪಂಚಾಯಿತಿ ಚುನಾವಣೆಯಲ್ಲ, ದೇಶದ ಚುನಾವಣೆ. ಪಕ್ಷ ಸೂಚನೆ ಕೊಟ್ಟಂತೆ ಕೆಲಸ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.ತಾಂತ್ರಿಕ ತೊಂದರೆಯಿಂದ ಪ್ರೀತಂ ಪ್ರಚಾರಕ್ಕೆ ಬಂದಿಲ್ಲ: ಪ್ರಜ್ವಲ್‌ಹಾಸನ: ಯಾರು ಯಾರನ್ನು ಭೇಟಿ ಮಾಡಬೇಕಿಲ್ಲ. ತಾಂತ್ರಿಕ ತೊಂದರೆಯಿಂದ ಪ್ರೀತಂಗೌಡರು ಪ್ರಚಾರಕ್ಕೆ ಬಂದಿರುವುದಿಲ್ಲ. ಈಗಾಗಲೇ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಜಿಲ್ಲೆಯಿಂದ ಮೋದಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಸಂಸದ, ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಮೈಸೂರಿನ ಸಮನ್ವಯ ಸಭೆಯಲ್ಲಿ ಭಾಗಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಲ್ಲಿ ಯಾರು ಯಾರನ್ನ ಭೇಟಿ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಮೈತ್ರಿಧರ್ಮ ಪಾಲಿಸುವುದು ಮುಖ್ಯ. ಈಗಾಗಲೇ ಮೈತ್ರಿಯಾಗಿದ್ದು, ಅದರ ಪಾಲನೆಯೂ ಆಗುತ್ತಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಪ್ರೀತಂ ಅವರು ಮೈಸೂರು, ಚಾಮರಾಜನಗರ ಉಸ್ತವಾರಿ ಇದ್ದಾರೆ. ಅಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳಿವೆ ಆದ್ದರಿಂದ ಅಲ್ಲಿದ್ದಾರೆ. ನಮ್ಮ ಜೊತೆ ಸೇರಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಅವರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ ಎಂದ ಅವರು, ಹಾಸನ ಜಿಲ್ಲೆಯಿಂದ ಮೋದಿಯವರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.ಪ್ರೀತಂಗೌಡರೇ ನಿನ್ನೆ, ಮೊನ್ನೆಯೂ ಸೂಚನೆ ನೀಡಿದ್ದಾರೆ. ಪ್ರಾಣೇಶಣ್ಣ ಅವರ ಜೊತೆ ಒಂದು ಗಂಟೆ ಚರ್ಚೆ ಮಾಡಿದ್ದು, ನನ್ನೆಲ್ಲಾ ಬೆಂಬಲಿಗರಿಗೆ ಕೆಲಸ ಮಾಡಲು ಹೇಳಿದ್ದೇನೆ. ನಾನು ಕೂಡ ಹೋರಾಟ ಮಾಡುತ್ತೇನೆ. ಅವರು ಮೈಸೂರು, ಚಾಮರಾಜನಗರ ಉಸ್ತವಾರಿ ಇದ್ದಾರೆ. ಅಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳಿವೆ ಆದ್ದರಿಂದ ಅಲ್ಲಿದ್ದಾರೆ. ನಮ್ಮ ಜೊತೆ ಸೇರಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಅವರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ ಎಂದ ಅವರು, ಹಾಸನ ಜಿಲ್ಲೆಯಿಂದ ಮೋದಿಯವರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.