ಹಿಂದುತ್ವ ಪ್ರತಿಪಾದಕ ಈಶ್ವರಪ್ಪಗೆ ವ್ಯಾಪಕ ಜನ ಬೆಂಬಲ

| Published : Apr 27 2024, 01:22 AM IST / Updated: Apr 27 2024, 10:12 AM IST

ಹಿಂದುತ್ವ ಪ್ರತಿಪಾದಕ ಈಶ್ವರಪ್ಪಗೆ ವ್ಯಾಪಕ ಜನ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷದಲ್ಲಿ ನೆಲೆ, ಬೆಲೆ ಸಿಗಬೇಕು ಎನ್ನುವ ಉದ್ದೇಶದಿಂದ ಕೆ.ಎಸ್.ಈಶ್ವರಪ್ಪ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

 ಸೊರಬ :  ಕಳೆದ 4ದಶಕಗಳಿಂದ ಬಿಜೆಪಿ ಸಂಘಟನೆಗಾಗಿ ಹಿಂದುತ್ವ ವಿಚಾರಧಾರೆ ಪ್ರತಿಪಾದಿಸುತ್ತಿರುವ ಕೆ.ಎಸ್.ಈಶ್ವರಪ್ಪ ಸ್ಪರ್ಧೆಗೆ ವ್ಯಾಪಕ ಜನ ಬೆಂಬಲ ದೊರೆಯುತ್ತಿದೆ ಎಂದು ತಾಲೂಕು ರಾಷ್ಟ್ರಭಕ್ತ ಬಳಗದ ಪ್ರಮುಖ ಹಾಗೂ ವಕೀಲ ಶಿವಪ್ಪ ದ್ವಾರಳ್ಳಿ ಹೇಳಿದರು.

ಗುರುವಾರ ಪಟ್ಟಣದಲ್ಲಿ ರಾಷ್ಟ್ರಭಕ್ತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದೇ ಕುಟುಂಬದ ಹಿಡಿತದಲ್ಲಿದ್ದ ಬಿಜೆಪಿ ಮುಕ್ತಗೊಳಿಸಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷದಲ್ಲಿ ನೆಲೆ, ಬೆಲೆ ಸಿಗಬೇಕು ಎನ್ನುವ ಉದ್ದೇಶದಿಂದ ಕೆ.ಎಸ್.ಈಶ್ವರಪ್ಪ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರ ಹಿಂದುತ್ವದ ಪ್ರಬಲ ಧೋರಣೆಗಾಗಿ ಬಿಜೆಪಿ ಕಾರ್ಯಕರ್ತರು ಕೂಡ ಅವರಿಗೆ ಬೆಂಬಲವಾಗಿ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗದವರ ನಾಯಕರಾದ ಈಶ್ವರಪ್ಪರಿಗೆ ಮಹಿಳಾ ಸ್ವಸಹಾಯ ಸಂಘಗಳು, ಕಾರ್ಮಿಕ ಸಂಘಗಳು ಹಾಗೂ ವಿಚಾರವಂತರು ಸ್ಪರ್ಧೆ ಸ್ವಾಗತಿಸುವ ಜೊತೆಗೆ ಚುನಾವಣೆಯಲ್ಲಿ ಮತ ನೀಡುವ ಮೂಲಕ ಈಶ್ವರಪ್ಪ ಗೆಲುವಿಗೆ ಕಾರಣಕರ್ತರಾಗಲಿದ್ದಾರೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದು, ಏ.೨೮ರ ಸಂಜೆ ೪ ಗಂಟೆಗೆ ತಾಲೂಕಿನ ಆನವಟ್ಟಿ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಬೃಹತ್ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಅಭ್ಯರ್ಥಿ ಈಶ್ವರಪ್ಪ ಮತಯಾಚಿಸಿ ಮಾತನಾಡಲಿದ್ದಾರೆ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗವಹಿಸುವರು. ಸಭೆಗೆ ತಾಲೂಕಿನಾದ್ಯಂತ ಸ್ವಯಂ ಪ್ರೇರಣೆಯಿಂದ ಸುಮಾರು 15  ರಿಂದ 20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದ ರಾಮ ನಾಯ್ಕ್, ಎಸ್. ಕೇಶವ ನಾಯ್ಕ್, ಸಂಜೀವ್ ನಾಯ್ಕ್ ಮೊದಲಾದವರು ಹಾಜರಿದ್ದರು.