ಸಾರಾಂಶ
ಬಂಧಿತರು ಅಂತಾರಾಜ್ಯ ಅರಣ್ಯ ಮತ್ತು ಕಾಡು ಪ್ರಾಣಿಗಳ ಹತ್ಯೆ ಚೋರರು.
ಯಲ್ಲಾಪುರ:
ಕಾಡುಪ್ರಾಣಿ ಉತ್ಪನ್ನ, ಶ್ರೀಗಂಧದ ಮರ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ, ₹ ೨೦ ಲಕ್ಷ ಮೌಲ್ಯದ ಸ್ವತ್ತುಗಳನ್ನು ಅರಣ್ಯಾಧಿಕಾರಿಗಳು ಜಪ್ತು ಮಾಡಿದ್ದಾರೆ.ಮಧ್ಯಪ್ರದೇಶದ ಜಲ್‌ಜಲಾ ಕೋಷ್(೩೩), ಅಮಿತ್ ಆದಿವಾಸಿ ಖುಷ್ ಪಾರ್ದಿ(೫೦), ಮಖನ್ ಸಿಂಗ್ ಪಾರ್ದಿ (೫೫), ಸರಿಯಾನಾ ಇನ್‌ಸೇಶ್ (೬೪), ಸಂಜೋನಿಬಾಯಿ ಆದಿವಾಸಿ ಪಾರ್ದಿ (೩೧) ಬಂಧಿತರು.
ತಾಲೂಕಿನ ಮಂಚಿಕೇರಿ ವಲಯದ ಜಕ್ಕೊಳ್ಳಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಕಲಗಟಾಗಿ ಕ್ಯಾಂಪ್‌ನಲ್ಲಿರುವ ಟೆಂಟ್‌ಗಳನ್ನು ಪರಿಶೀಲಿಸಿಲಾಗಿದ್ದು, ೩೦ ಕೆಜಿ ಶ್ರೀಗಂಧ ತುಂಡು, ಕಾಡುಪ್ರಾಣಿಗಳ ಉತ್ಪನ್ನ, ಕಾಡುಪ್ರಾಣಿಗಳ ಹಿಡಿಯಲು ಬಳಸುವ ಬಲೆ ಹಾಗೂ ಇತರ ವಸ್ತುಗಳಾದ ಕೈ ಕೊಡಲಿ, ಸಣ್ಣ ಗರಗಸ, ಚಾಕು ಮತ್ತು ಇಕ್ಕಳ, ಬೈಕ್ ಸಿಕ್ಕಿದ್ದು, ಜಪ್ತು ಮಾಡಲಾಗಿದೆ.ಬಂಧಿತರು ಅಂತಾರಾಜ್ಯ ಅರಣ್ಯ ಮತ್ತು ಕಾಡು ಪ್ರಾಣಿಗಳ ಹತ್ಯೆ ಚೋರರಾಗಿದ್ದು, ಮಧ್ಯಪ್ರದೇಶದ ಕಟನಿ ಜಿಲ್ಲೆಯ ಪಾರ್ದಿ ಜನಾಂಗದ ಕುಖ್ಯಾತ ಕಳ್ಳರಾಗಿದ್ದಾರೆ. ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತರೆಡ್ಡಿ ಮಾರ್ಗದರ್ಶನದಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಹಿಮಾವತಿ ಭಟ್, ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಸೇರಿದಂತೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))