ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ, ಸಂಘರ್ಷವಾಗಿದೆ: ಯದುವೀರ್‌

| Published : Sep 01 2025, 01:03 AM IST

ಸಾರಾಂಶ

ನಾಗರಹೊಳೆ ಅರಣ್ಯದಲ್ಲಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಮೋದಿ ಅವರ ಅಭಿವೃದ್ಧಿ ಸಂದೇಶ ರವಾನಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅದರಂತೆ ಸಾಕಾರಗೊಂಡಿದೆ.

ಕನ್ನಡಪ್ರಭ ವಾರ್ತೆ ಎಚ್‌.ಡಿ.ಕೋಟೆ

ಕಾಡಿನ ಸುರಕ್ಷೆತೆಯತ್ತ ಹೆಚ್ಚು ಒತ್ತು ಕೊಟ್ಟಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ತಿಳಿಸಿದರು.

ತಾಲೂಕಿನ ಮಾನಿಮೂಲೆ ಹಾಡಿಯಲ್ಲಿ ಆಯೋಜಿಸಿದ್ದ 125ನೇ ಮನ್‌ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ಅರಣ್ಯದ ಗಡಿ ಭಾಗಗಳಲ್ಲಿ ಸಾವಿರಾರು ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ರೂಪುಗೊಂಡ ಬಳಿಕ ಅನುಷ್ಠಾನದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದರು.

ಪ್ರಧಾನಿಯವರ ಕಾರ್ಯಕ್ರಮಗಳು ಮತ್ತು ಅವರ ಅಭಿವೃದ್ಧಿ ಕೆಲಸಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡ ತಲುಪುತ್ತಿವೆ. ಅದಕ್ಕೆ ನಿದರ್ಶನ ಎಂಬಂತೆ ಇಂದು ನಡೆದ ಕಾರ್ಯಕ್ರಮವೇ ಸಾಕ್ಷಿ ಎಂದರು.

ನಾಗರಹೊಳೆ ಅರಣ್ಯದಲ್ಲಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಮೋದಿ ಅವರ ಅಭಿವೃದ್ಧಿ ಸಂದೇಶ ರವಾನಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅದರಂತೆ ಸಾಕಾರಗೊಂಡಿದೆ ಎಂದು ಅವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕಂಬ್ರಳ್ಳಿ ಸುಬ್ಬಣ್ಣ ಮಾತನಾಡಿ, ಎಚ್.ಡಿ. ಕೋಟೆ ತಾಲ್ಲೂಕಿನ ಮಾನಿಮೂಲೆ ಹಾಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಹಲವು ಸಮಸ್ಯೆಗಳು ಎದುರಾದವು, ಆ ಸಮಸ್ಯೆಗಳಿಗೆ ಪರಿಹಾರ‌ಕಂಡುಕೊಂಡು ಕಾರ್ಯಕ್ರಮವನ್ನು ಹಾಡಿಯಲ್ಲಿ ಆಯೋಜನೆ ಮಾಡಿದ್ದೇವೆ. ಜೊತೆಗೆ ಇಲ್ಲಿನ ಸಮಸ್ಯೆ ಗುರುತಿಸಿ ಸಂಸದರಿಗೆ ಮಾಹಿತಿ ನೀಡಲಾಗಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಸುಬ್ರಹ್ಮಣ್ಯಸ್ವಾಮಿ, ಮಾಜಿ ಶಾಸಕ, ಬಾಲರಾಜು, ಎನ್.ವಿ. ಫಣೀಶ್, ತಾಲೂಕು ಅಧ್ಯಕ್ಷ ಶಂಭೇಗೌಡ, ಗುರುಸ್ವಾಮಿ, ಮುಖಂಡರಾದ ಮಹೇಶ್, ಕಿರಣ್, ಬಾಲಕೃಷ್ಣ, ಪರೀಕ್ಷಿತರಾಜೇ ಅರಸ್, ಸಿ.ಕೆ. ಗಿರೀಶ್, ಹಂಚೀಪುರ ಗುರುಸ್ವಾಮಿ, ಯೋಗೇಶ್‌ ಕುಮಾರ್, ಶಿವರಾಜಪ್ಪ, ಗಣಪತಿ, ಶಿವರುದ್ರಪ್ಪ, ಮೊತ್ತ‌ಬಸವರಾಜು, ವಿಜಯಕುಮಾರ್, ರಾಜು ಬಿಡುಗಲು, ಗುರುಸ್ವಾಮಿ, ಸುಬ್ರಹ್ಮಣ್ಯ, ಪೃಥ್ವಿ, ಲಕ್ಷ್ಮಣ್, ಬಾಲರಾಜು, ವಿವೇಕಾನಂದ, ವೆಂಕಟೇಶ್, ಸಾಮ್ರಾಟ್, ಸೋಮಶೇಖರ್, ಅನಿಲ್, ಪುಟ್ಟಣ್ಣ, ಮಂಜುನಾಥ್, ವೆಂಕಟಸ್ವಾಮಿ, ಶಿವರಾಜು, ಟಿ. ವೆಂಕಟೇಶ್, ನಟರಾಜು ಇದ್ದರು.