ಕಾಡಾನೆ ದಾಳಿ: ಕೃಷಿ ಫಸಲು ನಾಶ

| Published : Jul 13 2025, 01:18 AM IST

ಸಾರಾಂಶ

ಉಲುಗುಲಿ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಫಸಲನ್ನು ಹಾಳುಗೆಡವಿದೆ.

ಸುಂಟಿಕೊಪ್ಪ: ಪಟ್ಟಣದ ಅಂಚಿನಲ್ಲಿರುವ ಉಲುಗುಲಿ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಫಸಲನ್ನು ಹಾಳುಗೆಡವಿದೆ. ಶುಕ್ರವಾರ ರಾತ್ರಿ ತೋಟಕ್ಕೆ ಲಗ್ಗೆಯಿಟ್ಟ ಈ ಕಾಡಾನೆಗಳು ಕಾಫಿ ತೆಂಗು ಅಡಿಕೆ ಜೇನುಪೆಟ್ಟಿಗೆ ಗಿಡಗಳನ್ನು ತುಳಿದು ಧ್ವಂಸಗೊಳಿಸಿದೆ. ತೋಟದಲ್ಲಿದ್ದ ಸಿಂಟೆಕ್ಸ್ ನೀರಿನ ಟ್ಯಾಂಕ್ ಅನ್ನು ಕೊರೆಯಿಂದ ತಿವಿದು ಹಾನಿಗೊಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ತೋಟದ ವ್ಯವಸ್ಥಾಪಕ ಅಬ್ಧುಲ್ ಸಲಾಂ ಕಳೆದ ಹಲವು ದಿನಗಳಿಂದ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ. ಕೃಷಿ ಫಸಲು ಮಾತ್ರವಲ್ಲ ಜನರ ಪ್ರಾಣಕ್ಕೂ ಅಪಾಯ ತಂದೊಡ್ಡುವುದರಲ್ಲಿ ಸಂದೇಹವಿಲ್ಲ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.