ಹುಲಿತಿಮ್ಮಾಪುರದ ತೋಟಗಳಿಗೆ ಕಾಡಾನೆ ದಾಳಿ: ಅಡಕೆ ಬಾಳೆ ನಾಶ

| Published : Mar 03 2024, 01:30 AM IST

ಸಾರಾಂಶ

ತಾಲೂಕಿನ ಲಿಂಗದಹಳ್ಳಿ ಹೋಬಳಿ ಹುಲಿತಿಮ್ಮಾಪುರ ಗ್ರಾಮದ ಬಳಿ ಇರುವ ಸ.ನಂ.42 /1 ವಾಹಿದಾ ಬಾನು ಅವರ ತೋಟದಲ್ಲಿ ಮತ್ತು ಸ.ನಂ.42/ 5 ನಲ್ಲಿ ಸಫಿಯಾ ಬಾನು ಅವರ ತೋಟದಲ್ಲಿ ಸುಮಾರು ಒಟ್ಟು ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ, ಬಾಳೆ ತೋಟಕ್ಕೆ ಶುಕ್ರವಾರ ಕಾಡಾನೆಗಳು ನುಗ್ಗಿ ತೋಟದಲ್ಲಿ ಬೆಳೆದಿದ್ದ ಅಡಕೆ ಮತ್ತು ಬಾಳೆ ಗಿಡ ಗಳನ್ನು ಸಂಪೂರ್ಣವಾಗಿ ತುಳಿದು ಬೆಳೆ ನಾಶ ಮಾಡಿವೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಿಂಗದಹಳ್ಳಿ ಎ.ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಕಾಡಾನೆಗಳು ಗುಂಪು ಗುಂಪಾಗಿ ತೋಟಗಳಿಗೆ ನುಗ್ಗಿ ತೋಟದಲ್ಲಿ ಬೆಳೆದಿದ್ದ ಅಡಕೆ ಮರಗಳು ಮತ್ತು ಬಾಳೆಗಿಡಗಳನ್ನು, ತೋಟದಲ್ಲಿದ್ದ ವಾಲ್ವ್, ಪೈಪುಗಳು, ತಂತಿ ಬೇಲಿಗಳನ್ನು ತುಳಿದು ನಾಶ ಮಾಡಿದೆ ಎಂದು ತಿಳಿಸಿದ್ದಾರೆ. ಎರಡೂ ತೋಟಗಳಿಂದ ಸುಮಾರು 350ಕ್ಕೂ ಹೆಚ್ಚು ಬಾಳೆಗಿಡಗಳು ಸುಮಾರು 25ಕ್ಕೂ ಹೆಚ್ಚು ಅಡಕೆ ಮರಗಳು ನಾಶವಾಗಿದೆ, ಲಿಂಗದಹಳ್ಳಿ ಹೋಬಳಿ ನಂದಿಬಟ್ಟಲು, ಹುಲಿತಿಮ್ಮಾಪುರ, ಮಲ್ಲೇನಹಳ್ಳಿ ಮತ್ತು ತ್ಯಾಗದಬಾಗಿ ಈ ಗ್ರಾಮಗಳಲ್ಲೂ ಆಗಾಗ್ಗೆ ಕಾಡಾನೆಗಳು ನುಗ್ಗಿ ಬೆಳೆ ನಾಶ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

2ಕೆಟಿಆರ್.ಕೆ.3

ಕಾಡಾನೆಗಳು ನುಗ್ಗಿ ಅಡಕೆ ಮತ್ತು ಬಾಳೆಗಿಡಗಳನ್ನು ತುಳಿದು ನಾಶ ಮಾಡಿರುವುದು.