ಚಿಕ್ಕಮಗಳೂರುಮೂಡಿಗೆರೆ ತಾಲೂಕಿನ ಗಬ್ಬಳ್ಳಿ ಸಮೀಪದ ಹಾಸ್ಟೆಲ್ ಕಾಡು ಬಳಿ ಗುರುವಾರ ಬೆಳಗ್ಗೆ ಒಂಟಿ ಕಾಡಾನೆ ಅರಣ್ಯ ಇಲಾಖೆಯ ಇಟಿಎಫ್ ಬೀಟ್ ಫಾರೆಸ್ಟ್ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿರುವುದಲ್ಲದೆ ಇನ್ನಿಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ.
ಮೂವರಿಗೆ ಗಾಯ । ಚಿಕ್ಕಮಗಳೂರು ಎಸಿಎಫ್ ಮೋಹನ್, ಆರ್‌ಎಫ್‌ಒ ಮಂಜುನಾಥ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮೂಡಿಗೆರೆ ತಾಲೂಕಿನ ಗಬ್ಬಳ್ಳಿ ಸಮೀಪದ ಹಾಸ್ಟೆಲ್ ಕಾಡು ಬಳಿ ಗುರುವಾರ ಬೆಳಗ್ಗೆ ಒಂಟಿ ಕಾಡಾನೆ ಅರಣ್ಯ ಇಲಾಖೆಯ ಇಟಿಎಫ್ ಬೀಟ್ ಫಾರೆಸ್ಟ್ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿರುವುದಲ್ಲದೆ ಇನ್ನಿಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ.
ಕಾಡಾನೆ ದಾಳಿಗೆ ಇಟಿಎಫ್ ಬೀಟ್ ಫಾರೆಸ್ಟ್ ರಮೇಶ್ (44) ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರಗುತ್ತಿಗೆ ಸಿಬ್ಬಂದಿ ವಿಶ್ವ (20) ಹಾಗೂ ಜೀವನ್(19) ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ.ಗುರುವಾರ ಬೆಳಗ್ಗೆ ಒಂಟಿ ಕಾಡಾನೆ ಗಾಬರಿಗೊಂಡು ತಾಲೂಕಿನ ಹಾಸ್ಟೆಲ್ ಕಾಡು ಬಳಿ ಕಿರಣ್ ಮತ್ತು ಪ್ರಕಾಶ್‌ಗೌಡ ಎಂಬುವರ ತೋಟದ ಪ್ರದೇಶದಲ್ಲಿ ಓಡಾಡಿಕೊಂಡಿದ್ದರಿಂದ ಕಲ್ಲುಗುಡ್ಡ, ಚಟ್ಟನಹಳ್ಳಿ, ಹುಲಿಹಂಡ್ಲು, ಕಾರ್‌ಬೈಲ್, ಮೂಡಸಸಿ ಭಾಗದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಅಲ್ಲದೇ ಯಾರೂ ಕೂಡ ತೋಟದ ಕೆಲಸಕ್ಕೆ ಹೋಗಬಾರದೆಂದು ಅರಣ್ಯ ಇಲಾಖೆ ಎಚ್ಚರಿಕೆ ಸೂಚನೆ ನೀಡಿತ್ತು.
ಗುರುವಾರ ಬೆಳಗ್ಗೆ 9ರ ಸಮಯದಲ್ಲಿ ಆ ಪ್ರದೇಶದಲ್ಲಿ ಕಾಡಾನೆಯನ್ನು ಬೇರೆಡೆಗೆ ಓಡಿಸಲು 6 ಮಂದಿ ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇ ಟಿ ಎಫ್ ಬಿಟ್ ಫಾರೆಸ್ಟ್ ಮತ್ತು ಸಿಬ್ಬಂದಿ ಕಾಡಾನೆಯಿಂದ ದೂರದ ಅಂತರ ಕಾಯ್ದುಕೊಂಡಿದ್ದರು. ಮುಂದಕ್ಕೆ ಹೋಗುತ್ತಿದ್ದ ಕಾಡಾನೆ ತಕ್ಷಣ ಹಿಂದಿರುಗಿ ವೇಗವಾಗಿ ಸಿಬ್ಬಂದಿಯನ್ನು ಬೆದರಿಸಲು ಪ್ರಾರಂಭಿಸಿ ದಾಳಿ ನಡೆಸಿದ್ದರ ಪರಿಣಾಮ ಇಟಿಎಫ್ ಬೀಟ್ ಫಾರೆಸ್ಟರ್ ರಮೇಶ್ ಗಂಭೀರ ಗಾಯಗೊಂಡರು. ಅವರೊಂದಿಗಿದ್ದ ಹೊರಗುತ್ತಿಗೆ ಸಿಬ್ಬಂದಿ ವಿಶ್ವ ಮತ್ತು ಜೀವನ್ ಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಚಿಕ್ಕಮಗಳೂರು ಎಸಿಎಫ್ ಮೋಹನ್, ಆರ್‌ಎಫ್‌ಒ ಮಂಜುನಾಥ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ---ಬಾಕ್ಸ್ ---
ರೊಚ್ಚಿಗೆದ್ದ ಕಾಡಾನೆಯಿಂದ ಮಾನವರ ಜತೆ ಸಂಘರ್ಷಕಾಡಾನೆಗಳನ್ನು ಓಡಿಸಲು ಬೇಕಾದ ಪರಿಕರಕಗಳಿಲ್ಲ. ಸಕಲೇಶಪುರ ಭಾಗದಿಂದ ಕಾಡಾನೆಗಳು ಮಲೆನಾಡಿಗೆ ಆಗಮಿಸುತ್ತಿದ್ದು. ಆ ಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಭಾಗಕ್ಕೆ ಓಡಿಸುತ್ತಿದ್ದಾರೆ. ಈ ಭಾಗಕ್ಕೆ ಬಂದ ಕಾಡಾನೆಗಳನ್ನು ಮತ್ತೆ ಆ ಭಾಗಕ್ಕೆ ಓಡಿಸಲಾಗುತ್ತದೆ. ಒಟ್ಟಿನಲ್ಲಿ ಎರಡು ಕಡೆಯವರು ಆನೆಗಳನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಓಡುತ್ತಾ ಇದ್ದು ರೊಚ್ಚಿಗೆದ್ದಿರುವ ಕಾಡಾನೆಗಳು ಮಾನವರ ಮೇಲೆ ಸಂಘರ್ಷ ನಡೆಸುತ್ತಿವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆಯಿಲ್ಲ.