ಸಾರಾಂಶ
ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಚೆನಮಣಿಯ ಶ್ಯಾಮ್ ಎಂಬುವರ ತೋಟಕ್ಕೆ ಕಾಡಾನೆಗಳು ನುಗ್ಗಿ ಅಡಕೆ, ಬಾಳೆ ಮರಗಳಿಗೆ ಹಾನಿ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಚೆನಮಣಿಯ ಶ್ಯಾಮ್ ಎಂಬುವರ ತೋಟಕ್ಕೆ ಕಾಡಾನೆಗಳು ನುಗ್ಗಿ ಅಡಕೆ, ಬಾಳೆ ಮರಗಳಿಗೆ ಹಾನಿ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಶ್ಯಾಮ್ ಅವರ ತೋಟದಲ್ಲಿ 500 ರಿಂದ 600 ನೇಂದ್ರ ಬಾಳೆ, 35 ರಿಂದ 40 ಅಡಕೆ ಸಸಿಗಳನ್ನು ಹಾಳು ಮಾಡಿದೆ. ಇದರಿಂದ ಸಾವಿರಾರು ರು. ನಷ್ಟ ಉಂಟಾಗಿದೆ. ಕಳೆದ ಒಂದು ವಾರದಿಂದಲೂ ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಜಾಸ್ತಿ ಯಾಗಿದ್ದು ಜನರು ಭಯ ಭೀತರಾಗಿದ್ದಾರೆ. ಹಗಲು ಹೊತ್ತಿನಲ್ಲಿ ಕಾಡಿನ ಮಧ್ಯೆ ಅವಿತುಕೊಳ್ಳುವ ಕಾಡಾನೆಗಳು ರಾತ್ರಿ ರೈತರ ಜಮೀನಿಗೆ ಬಂದು ಅಡಕೆ, ಬಾಳೆ, ಭತ್ತದ ಬೆಳೆ ಹಾಳು ಮಾಡುತ್ತಿದೆ.ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ವಾಪಾಸು ಓಡಿಸಿ ಕಾಡಾನೆಗಳು ನಾಡಿಗೆ ಬಾರದಂತೆ ರೇಲ್ವೆ ಹಳಿಗಳ ಬೇಲಿ ಯನ್ನು ಹಾಕಿ ಶಾಶ್ವತ ಪರಿಹಾರ ಮಾಡಬೇಕು. ಜನರ ಭೀತಿ ದೂರಮಾಡಬೇಕು ಎಂಬುದು ಗ್ರಾಮಸ್ಥರ, ನಾಗರಿಕರ ಆಗ್ರಹವಾಗಿದೆ.