ಸಾರಾಂಶ
ಕಾಡಾನೆಯು ತೋಟದೊಳಗೆ ನುಗ್ಗದಿರಲಿ ಎಂದು ಸೋಲಾರ್ ತಂತಿ ಅಳವಡಿಸಿದ್ದ ತೋಟದ ಮುಂಭಾಗದ ಗೇಟನ್ನು ಬಹಳ ನಾಜೂಕಾಗಿ ಮುರಿದು ತೋಟದೊಳಗೆ ಕಾಡಾನೆ ನುಗಿದ್ದ ದೃಶ್ಯಾವಳಿಯನ್ನು ಕೆಲದಿನಗಳ ಹಿಂದೆ ತಾಲೂಕು ಅರೇಹಳ್ಳಿ ಹೋಬಳಿಯ ಲಿಂಗಾಪುರದಲ್ಲಿ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದೀಗ ಇಂತಹದ್ದೆ ಮತ್ತೊಂದು ವಿಡಿಯೋ ಲಭ್ಯವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆಯು ತೋಟದೊಳಗೆ ನುಗ್ಗದಿರಲಿ ಎಂದು ಸೋಲಾರ್ ತಂತಿ ಅಳವಡಿಸಿದ್ದ ತೋಟದ ಮುಂಭಾಗದ ಗೇಟನ್ನು ಬಹಳ ನಾಜೂಕಾಗಿ ಮುರಿದು ತೋಟದೊಳಗೆ ಕಾಡಾನೆ ನುಗಿದ್ದ ದೃಶ್ಯಾವಳಿಯನ್ನು ಕೆಲದಿನಗಳ ಹಿಂದೆ ತಾಲೂಕು ಅರೇಹಳ್ಳಿ ಹೋಬಳಿಯ ಲಿಂಗಾಪುರದಲ್ಲಿ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದೀಗ ಇಂತಹದ್ದೆ ಮತ್ತೊಂದು ವಿಡಿಯೋ ಲಭ್ಯವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.ಅರೇಹಳ್ಳಿ ಮುಖ್ಯರಸ್ತೆಯಿಂದ ಲಿಂಗಾಪುರ ಗ್ರಾಮದ ಕಡೆ ನಡೆದುಕೊಂಡು ಬರುತ್ತಿದ್ದ ಕಾಡಾನೆಗೆ ಎದುರಿನಿಂದ ಬೈಕ್ ಸವಾರರು ಎದುರಾಗಿದ್ದಾರೆ. ಕಾಡಾನೆ ಬರುತ್ತಿರುವುದನ್ನು ಕಂಡು ಬೈಕ್ ಸವಾರರು ಬೈಕನ್ನು ಅಲ್ಲೆ ನಿಲ್ಲಿಸಿ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಒಂಟಿ ಕಾಡಾನೆ ಸೋಲಾರ್ ಬೇಲಿ ಅಳವಡಿಸಿದ್ದ ಮತ್ತದೇ ತೋಟದೊಳಗೆ ನುಗ್ಗಿದ್ದು ಕೂಲಿ ಕಾರ್ಮಿಕರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿದೆ.