ನಾಪೋಕ್ಲು: ಸಮೀಪದ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಕಾಡಾನೆ ಮೃತ ದೇಹ ಪತ್ತೆಯಾಗಿದೆ.

ನಾಪೋಕ್ಲು: ಸಮೀಪದ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಕಾಡಾನೆ ಮೃತ ದೇಹ ಪತ್ತೆಯಾಗಿದೆ.ನಾಲಡಿ ಗ್ರಾಮದ ಪರದಂಡ ಡಾಲಿ ಎಂಬವರ ಕಾಫಿ ತೋಟದಲ್ಲಿ ಕಾಡಾನೆ ಮೃತ ದೇಹ ಪತ್ತೆಯಾಗಿದೆ. ಡಾಲಿ ಅವರ ಕಾರ್ಮಿಕರು ಮಂಗಳವಾರ ಬೆಳಗ್ಗೆ ಮೃತ ದೇಹ ಕಂಡು ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಜೆಸಿಬಿ ಯಂತ್ರದ ಮೂಲಕ ರಸ್ತೆಯನ್ನು ನಿರ್ಮಾಣ ಮಾಡಿ ದಫನ ಮಾಡಲಾಯಿತು. ಈ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಕೆಲಸ ಕಾರ್ಯಗಳಿಗೆ ಮತ್ತು ಶವ ಪರೀಕ್ಷೆ ಮಾಡಲು ಅಡಚಣೆಯನ್ನು ಉಂಟು ಮಾಡಿದೆ. ಅರಣ್ಯ ಇಲಾಖೆಗೆ ಸಿಎಫ್ ಸೆಂಥಿಲ್ ಕುಮಾರ್, ಡಿಎಫ್ಒ ನೆಹರು , ಆರ್ ಎಫ್ಒ ಶಂಕರ್, ಬಿಆರ್ ಎಫ್ಒ ಫಿರೋಜ್ ಖಾನ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ಪರಿಶೀಲನೆ ನಡೆಸಿದರು. ಡಾ.ಮುಜುಬ್ ಖಾನ್ ಮರಣೋತ್ತರ ಪರೀಕ್ಷೆ ನಡೆಸಿದರು.