ಅರಣ್ಯದಲ್ಲಿ ಕಾಡಾನೆಗಳ ಸಂಚಾರ ರೈತರಲ್ಲಿ ಮತ್ತು ಆತಂಕ

| Published : Dec 26 2024, 01:00 AM IST

ಸಾರಾಂಶ

Wild elephant movement in the forest is a concern for farmers.

-ಆನಂದಪುರ ಅರಸಾಳು ಮತ್ತು ಚೋರಡಿ ಅರಣ್ಯ ಪ್ರದೇಶದಲ್ಲಿ ಆನೆ ಸಂಚಾರ

------

ಕನ್ನಡಪ್ರಭ ವಾರ್ತೆ ಆನಂದಪುರ

15 ದಿನಗಳಿಂದ ಅರಸಾಳು ಮತ್ತು ಚೋರಡಿ ವಲಯ ಅರಣ್ಯ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದು ರೈತರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಸೋಮವಾರ ರಾತ್ರಿ ಆಚಾಪುರ ಗ್ರಾಮ ಪಂಚಾಯಿತಿಯ ಕುರುಬರ ಜಡ್ದು ಗ್ರಾಮದಲ್ಲಿ ಜೋಳದ ಕಣದಲ್ಲಿ ಜೋಳವನ್ನು ತಿಂದು ಹೋಗಿದೆ. ಜೋಳದ ಕಣ ಕಾಯಲು ದೊರೆಸ್ವಾಮಿ ಗೌಡರ ಮಗನಾದ ನವೀನ್ ಎಂಬುವವರು ಕಾರಿನಲ್ಲಿ ಮಲಗಿದ್ದರು. ಆನೆಗಳು ಮೆಕ್ಕೆಜೋಳವನ್ನು ತಿಂದು ಹಾಗೆ ಮುಂದೆ ಸಂಚರಿಸುವೆ. ಬಂದಂತ ಆನೆಗಳು ಕಾರಿನ ಸಮೀಪ ತೆರಳದೆ ಹೋದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ಒಮ್ಮೆ ಏನಾದರೂ ಆನೆಗಳು ಕಾರಿನ ಮೇಲೆ ದಾಳಿ ಮಾಡಿದ್ದರೆ ಪ್ರಾಣಹಾನಿ ಸಂಭವಿಸುತ್ತಿತ್ತು. ಈ ಘಟನೆ ತಿಳಿದ ಗ್ರಾಮಸ್ಥರು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಮಂಗಳವಾರ ರಾತ್ರಿ ಹಳೆ ತುಪ್ಪೂರು, ಹೊರಬೈಲು ಗಡಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಈ ಭಾಗದ ರೈತರ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿರುವ ಘಟನೆ ನಡೆದಿದೆ.

ಕಾಡಾನೆಗಳನ್ನು ಬಂದಂತಹ ದಾರಿಯಲ್ಲಿ ಹಿಮ್ಮೆಟ್ಟಿಲು ಅರಣ್ಯ ಇಲಾಖೆ ಸಿಬ್ಬಂದಿಯವರು ಶತ ಪ್ರಯತ್ನ ನಡೆಸುತ್ತಿರುವುದಾಗಿ ಚೋರಡಿ ವಲಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ. ಕಾಡಾನೆಗಳಿಂದ ದುರಂತಗಳು ಸಂಭವಿಸುವ ಮೊದಲೇ ಅರಣ್ಯ ಪ್ರದೇಶದಿಂದ ಕಾಡಾನೆಗಳನ್ನು ಓಡಿಸುವಲ್ಲಿ ಅರಣ್ಯ ಇಲಾಖೆ ಮುಂದಾಗಬೇಕಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.

-------------------

ಫೋಟೋ : ಆನಂದಪುರ ಅರಸಾಳು ಮತ್ತು ಚೋರಡಿ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿರುವ ಆನೆಗಳು.25 ಎ, ಎನ್, ಪಿ 2