ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಸ್.ಕೆ.ಬಾರ್ಡರ್ ಸಮೀಪ ಶೃಂಗೇರಿ ತಾಲೂಕಿನ ಕೆರೆ ಪಂಚಾಯಿತಿ ಗಂಗಾಮೂಲ ಬಳಿ ರಸ್ತೆಯಂಚಿನಲ್ಲಿಯೇ ಕಾಡಾನೆ ಓಡಾಡುತ್ತಿದ್ದು ಸ್ಥಳೀಯರು, ಪ್ರವಾಸಿಗರಲ್ಲಿ ಆತಂಕ ಹುಟ್ಟಿಸಿದೆ.
ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಎಸ್.ಕೆ.ಬಾರ್ಡರ್ ಸಮೀಪ ಶೃಂಗೇರಿ ತಾಲೂಕಿನ ಕೆರೆ ಪಂಚಾಯಿತಿ ಗಂಗಾಮೂಲ ಬಳಿ ರಸ್ತೆಯಂಚಿನಲ್ಲಿಯೇ ಕಾಡಾನೆ ಓಡಾಡುತ್ತಿದ್ದು ಸ್ಥಳೀಯರು, ಪ್ರವಾಸಿಗರಲ್ಲಿ ಆತಂಕ ಹುಟ್ಟಿಸಿದೆ.
ಸೋಮವಾರ ಹಾಡುಹಗಲೇ ಪ್ರವಾಸಿ ವಾಹನ ಸವಾರರಿಗೆ ರಸ್ತೆಯಂಚಿನಲ್ಲಿ ಕಾಣಿಸಿಕೊಂಡಿದೆ. ಗಂಗಾಮೂಲ, ಗಂಗಡಿಕಲ್ಲು, ಹನುಮನಗುಂಡಿ ಜಲಪಾತ ಈ ಪ್ರದೇಶದಲ್ಲಿಯೇ ಇದ್ದು, ಪ್ರವಾಸಿಗರ, ಚಾರಣ ಪ್ರಿಯರ ನೆಚ್ಚಿನ ತಾಣವಾಗಿದೆ. ಆದರೀಗ ಇಲ್ಲಿ ಕಾಡಾನೆ ಓಡಾಡ ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ಮಂಜಾಗ್ರತೆ ಕ್ರಮವಾಗಿ ಚಾರಣಪ್ರಿಯರ ತಾಣವಾದ ಕುರಿಂಜಾಲು, ಗಂಗಡಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.ಶೃಂಗೇರಿ ಕಾರ್ಕಳ, ಕುದುರೆಮುಖ, ಕಳಸ ಸಂಪರ್ಕ ರಾಷ್ಟ್ರೀಯ ಹೆದ್ದಾರಿ 169 ರ ಮುಖ್ಯ ರಸ್ತೆಯಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಕಾಡಾನೆ ಓಡಾಟ ಸಂಚಾರಿಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಕೆರೆಕಟ್ಟೆ, ಗುಲಗಂಜಿಮನೆ, ಗಣಪತಿಕಟ್ಟೆ ,ಶೀರ್ಲು ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡು ಕಾಡಾನೆಗಳು ಓಡಾಡುತ್ತಿವೆ. ಇದೀಗ ಗಂಗಾಮೂಲ ಬಳಿಯೂ ಒಂಟಿ ಸಲಗ ಪ್ರತ್ಯಕ್ಷ ವಾಗಿ ರಸ್ತೆಯಂಚಿನಲ್ಲಿ ಸಂಚರಿಸುತ್ತಿದ್ದು ಮತ್ತಷ್ಟು ಭೀತಿ ಆವರಿಸಿದೆ.
ಕೆಲ ದಿನಗಳ ಹಿಂದೆ ಕೆರೆಕಟ್ಟೆ ಬಳಿ ಇಬ್ಬರನ್ನು ಬಲಿತೆಗೆದುಕೊಂಡಿದ್ದ ಆನೆಯನ್ನು ಸೆರೆಹಿಡಿದಿದ್ದರೂ ಆನೆ ಹಾವಳಿ ಮಾತ್ರ ಮುಂದುವರೆದಿದೆ. ಈಗಾಗಲೇ ಈ ಭಾಗದ ಸ್ಥಳೀಯರಲ್ಲಿ ನಿದ್ದೆಗೆಡಿಸಿರುವ ಕಾಡಾನೆಗಳು ಇದೀಗ ಪ್ರವಾಸಿಗರು, ಸಂಚಾರಿಗಳ ಪ್ರಯಾಣಕ್ಕೂ ಭೀತಿ ಹುಟ್ಟಿಸಿದೆ.2 ಶ್ರೀ ಚಿತ್ರ 1-
ಶೃಂಗೇರಿ ತಾಲೂಕಿನ ಕೆರೆ ಪಂಚಾಯಿತಿ ಗಂಗಾಮೂಲ ರಸ್ತೆಯಂಚಿನಲ್ಲಿ ಕಾಡಾನೆ ಓಡಾಡುತ್ತಿರುವುದು.