ಸಾರಾಂಶ
ಕಾಡಾನೆ ಓಡಾಟ ಸಂದರ್ಭ ಯವುದೇ ಅಪಾಯ,ಹಾನಿ ಉಂಟಾಗಿಲ್ಲ ಕೆಲ ದಿನಗಳ ಹಿಂದೆ ದೇವರಗದ್ದೆ ಪರಿಸರದಲ್ಲಿ ಒಂಟಿಸಲಗ ಸಂಚಾರ ಮಾಡಿದೆ. ಆ ಸಂದರ್ಭ ಕಾಡಾನೆ ತೋಟದ ಬೇಲಿ ಹಾಗೂ ಗೇಟುಗಳಿಗೆ ಹಾನಿ ಮಾಡಿ ತೆರಳಿತ್ತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿ ಸಮೀಪ ಪಾರ್ಕಿಂಗ್ ಪರಿಸರದ ಮೂಲಕ ಕಾಡಾನೆ ಓಡಾಟ ನಡೆಸಿದ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ.ಕುಕ್ಕೆ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯ ಸಮೀಪದ ವ್ಯಾಸಮಂದಿರ ವಸತಿಗೃಹ ಪಾರ್ಕಿಂಗ್ ಬಳಿಯಿಂದ ಸುಬ್ರಹ್ಮಣ್ಯ ಮಠದ ಆವರಣಕ್ಕೆ ಆಗಮಿಸಿ ಬಳಿಕ ಸಮೀಪದ ತೋಟ ದಾರಿ ಮೂಲಕ ಸಂಚರಿಸಿ ಮತ್ತೆ ಅರಣ್ಯ ಭಾಗಕ್ಕೆ ತೆರಳಿದೆ. ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕಾಡಾನೆ ಕೆಲ ಹೊತ್ತು ದೇವಳದ ಸಮೀಪದ ಪರಿಸದಲ್ಲಿ ಸಂಚರಿಸಿ ಕಾಡಿನತ್ತ ತೆರಳಿದೆ ಎಂದು ತಿಳಿದುಬಂದಿದೆ.ಕಾಡಾನೆ ಓಡಾಟ ಸಂದರ್ಭ ಯವುದೇ ಅಪಾಯ,ಹಾನಿ ಉಂಟಾಗಿಲ್ಲ ಕೆಲ ದಿನಗಳ ಹಿಂದೆ ದೇವರಗದ್ದೆ ಪರಿಸರದಲ್ಲಿ ಒಂಟಿಸಲಗ ಸಂಚಾರ ಮಾಡಿದೆ. ಆ ಸಂದರ್ಭ ಕಾಡಾನೆ ತೋಟದ ಬೇಲಿ ಹಾಗೂ ಗೇಟುಗಳಿಗೆ ಹಾನಿ ಮಾಡಿ ತೆರಳಿತ್ತು.