ಸಾರಾಂಶ
- ಪಕ್ಷದ ಆಂತರಿಕ ವಿಚಾರ ಒಳಗೆ ಮಾತಾಡ್ತೀನಿ, ನಾನು ಪ್ರಚಾರಕ್ಕೆ ಮಾತಾಡಲ್ಲ: ಜಿ.ಎಂ.ಸಿದ್ದೇಶ್ವರ ಹೇಳಿಕೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಬಿಹಾರದಲ್ಲಿ ಸಂಪೂರ್ಣ ಬಹುಮತದೊಂದಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನಾನೂ ಸಹ ಎರಡು ದಿನಗಳ ಅಲ್ಲಿ ಪ್ರಚಾರಕ್ಕೆ ಹೋಗಿದ್ದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ಕುರುಬರ ಕೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ ನಂತರ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮತ್ತೆ ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಅಲ್ಲದೇ, ಬಿಹಾರದ ಚುನಾವಣೆ ಪ್ರಚಾರದ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಸಿಕ್ಕಿದ್ದರು. ರಾಜ್ಯದ ವಿಚಾರದ ಬಗ್ಗೆ ಚರ್ಚಿಸಬೇಕೆಂದರೆ ನಾನು ದೆಹಲಿಯಲ್ಲಿ ನೇರವಾಗಿ ಅಮಿತ್ ಶಾ ಕಚೇರಿಗೆ ಹೋಗುತ್ತೇನೆ ಎಂದು ತಿಳಿಸಿದರು.ಪ್ರೀತಂಗೌಡ ಬಂದ ಟೀ ಕುಡಿದು ಹೋದ:
ಬಿಜೆಪಿ ಜಿಲ್ಲಾ ಘಟಕದ ಕೋರ್ ಕಮಿಟಿ ಸಭೆಗೆಂದು ದಾವಣಗೆರೆ ಆಗಮಿಸಿದ್ದ ಪ್ರೀತಂ ಗೌಡ ಬಂದ, ಟೀ ಕುಡಿದು ಹೋದ ಅಷ್ಟೇ. ನಾನು ಏನು ಹೇಳಬೇಕೆಂಬುದನ್ನು ರಾಜ್ಯ ನಾಯಕರಿಗೆ ಹೇಳಿದ್ದೇನೆ. ಅವೆಲ್ಲಾ ಪಕ್ಷದ ಆಂತರಿಕ ವಿಚಾರವಾಗಿದ್ದು, ಮಾಧ್ಯಮಗಳ ಮುಂದೆ ಹೇಳುವಂತಹದ್ದಲ್ಲ. ನಮ್ಮ ಪಕ್ಷದ ಒಳಗೆ ನಾನು ಮಾತನಾಡುತ್ತೇನೆ. ಪ್ರಚಾರಕ್ಕೆಲ್ಲಾ ನಾನು ಮಾತನಾಡುವುದಿಲ್ಲ ಎಂದರು.ಬಿಹಾರ ಚುನಾವಣೆ ಫಲಿತಾಂಶ ಇನ್ನೇನು ಪ್ರಕಟಗೊಳ್ಳಲಿದೆ. ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಆಗುತ್ತಾ ಎಂಬುದೆಲ್ಲವೂ ನಮ್ಮ ಹೈಕಮಾಂಡ್ ಹಾಗೂ ಅಮಿತ್ ಶಾ ಅವರಿಗಷ್ಟೇ ಗೊತ್ತು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದಾವಣಗೆರೆ ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ನಾನು ಮಾತನಾಡುವುದಿಲ್ಲ. ಸಂಸದರು ಒಳ್ಳೆಯ ಕೆಲಸ ಮಾಡಿದರೆ ನಾನು ಸ್ವಾಗತ ಮಾಡುತ್ತೇನೆ. ಮೆಕ್ಕೆಜೋಳ ಖರೀದಿ ಕೇಂದ್ರ ಇನ್ನೂವರೆಗೆ ರಾಜ್ಯ ಸರ್ಕಾರ ತೆರೆಯದೇ ಇರುವುದು ಖಂಡನೀಯ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ₹2400 ದರ ನೀಡಿದ್ದೆವು. ತಕ್ಷಣ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಲಿ. ಮೊದಲು ರಾಜ್ಯ ಸರ್ಕಾರ ತನ್ನ ಕೆಲಸ ಮಾಡಲಿ ಎಂದು ಸಿದ್ದೇಶ್ವರ ಸಲಹೆ ನೀಡಿದರು.ಚುನಾವಣೆಗೆ ನಿಲ್ಲೋದಿಲ್ಲ:
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ ಅಂತೇನೂ ನನಗೆ ಗೊತ್ತಿಲ್ಲ. ಯಾರಾದರೂ ಕಾಂಗ್ರೆಸ್‌ನವರೇ ಮುಖ್ಯಮಂತಿ ಆಗಿರುವುದಿಲ್ಲ. ಒಂದುವೇಳೆ ಕಾಂಗ್ರೆಸ್ ಸರ್ಕಾರ ಬಿದ್ದರೆ ಅದರ ಬಗ್ಗೆ ಯೋಚನೆ ಮಾಡೋಣ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಜನರು ಇದ್ದಾರೆ, ನೀವೂ ಇದ್ದೀರಿ, ನೋಡೋಣ ಎಂದು ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರಕ್ಕೆ ತರಲು ಎಂಟ್ರಿ ಕೊಡುತ್ತೀರಾ ಎಂಬ ಪ್ರಶ್ನೆಗೆ ಜಿ.ಎಂ.ಸಿದ್ದೇಶ್ವರ ನಗುತ್ತಾ ಮುಂದಡಿ ಇಟ್ಟರು.ಈ ಸಂದರ್ಭ ಬಿಜೆಪಿ ಮುಖಂಡರಾದ ಯಶವಂತ ರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ರಾಜನಹಳ್ಳಿ ಶಿವಕುಮಾರ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ಚೇತನಾ ಬಾಯಿ ಇತರರು ಇದ್ದರು.
- - -(ಬಾಕ್ಸ್) ದೆಹಲಿ ಸ್ಪೋಟಕ್ಕೆ ಪ್ರಧಾನಿ ತಕ್ಕ ಶಿಕ್ಷೆ ಗ್ಯಾರಂಟಿ ದೆಹಲಿ ಬಾಂಬ್ ಸ್ಫೋಟಕ್ಕೆ ಭದ್ರತಾ ವೈಫಲ್ಯವೇ ಕಾರಣವಾಗಿದ್ದರೆ 8 ಉಗ್ರರನ್ನು ಬಂಧಿಸುತ್ತಿರಲಿಲ್ಲ. ವೈದ್ಯರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದು ದುರಾದೃಷ್ಟಕರ. ಅಂತಹ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನೇ ರದ್ದುಪಡಿಸಬೇಕು. ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರ ಭದ್ರವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಸ್ಫೋಟದಲ್ಲಿ 13 ಜನರ ಪ್ರಾಣ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಸುಮ್ಮನೆ ಕೂಡುವುದಿಲ್ಲ ಎಂದು ಹೇಳಿದ್ದಾರೆ. ಉಗ್ರರಿಗೆ, ಉಗ್ರ ಸಂಘಟನೆಗಳಿಗೆ ಸರಿಯಾದ ಶಿಕ್ಷೆ ಕೊಡುವುದಂತೂ ಸತ್ಯ ಎಂದು ಸಿದ್ದೇಶ್ವರ ವಿಶ್ವಾಸದಿಂದ ಹೇಳಿದರು.
- - --13ಕೆಡಿವಿಜಿ7.ಜೆಪಿಜಿ:
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ.;Resize=(128,128))
;Resize=(128,128))
;Resize=(128,128))
;Resize=(128,128))