ಜೆಡಿಎಸ್ ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ : ಸ್ಪಷ್ಟನೆ ನೀಡಿದ ನಾಯಕ

| N/A | Published : Mar 22 2025, 02:07 AM IST / Updated: Mar 22 2025, 12:12 PM IST

ಜೆಡಿಎಸ್ ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ : ಸ್ಪಷ್ಟನೆ ನೀಡಿದ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಲು ತಮ್ಮನ್ನು ಬೆಂಬಲಿಸಿ ಸಹಕಾರ ನೀಡಿದ ಜೆಡಿಎಸ್ ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ಸ್ಪಷ್ಟಪಡಿಸಿದರು.

 ಕಡೂರು : ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಲು ತಮ್ಮನ್ನು ಬೆಂಬಲಿಸಿ ಸಹಕಾರ ನೀಡಿದ ಜೆಡಿಎಸ್ ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ಸ್ಪಷ್ಟಪಡಿಸಿದರು.

ಶುಕ್ರವಾರ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಯುವ ಮುಖಂಡ ಚೇತನ್ ಕೆಂಪರಾಜು ನೇತೃತ್ವದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಕಳೆದ 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ದುಡಿದಿದ್ದರೂ ಕೂಡ ಕಾಂಗ್ರೆಸ್ ತಮ್ಮನ್ನು ಗುರುತಿಸದೆ ನಿರ್ಲಕ್ಷಿಸುತ್ತಾ ಬಂದಿದೆ. ಹಾಗಾಗಿ ತಾವು ಜೆಡಿಎಸ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ ನನ್ನನ್ನು ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಮಾಡಿ ತಮಗೆ ಗೌರವ ನೀಡಿದೆ. 

ಇದರಲ್ಲಿ ಕಾಂಗ್ರೆಸ್‌ ನ ಜಿಪಂ ಮಾಜಿ ಸದಸ್ಯರೊಬ್ಬರು ಕಾಂಗ್ರೆಸ್ ನ ನಿರ್ದೇಶಕರು ಕಾಂಗ್ರೆಸ್ ಬಿಟ್ಟು ಹೋಗಿಲ್ಲ ಎಂದು ಪತ್ರಿಕೆಗಳಲ್ಲಿ ನೀಡಿರುವ ಹೇಳಿಕೆ ಸುಳ್ಳು. ಹಾಗಾಗಿ ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು ನೇತೃತ್ವದಲ್ಲಿ ನಾನು ಸ್ವ ಇಚ್ಛೆಯಿಂದ ಜೆಡಿಎಸ್ ಪಕ್ಷದಲ್ಲೇ ಉಳಿಯುವುದಾಗಿ ಪ್ರಕಟಿಸಿದರು.

ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜ್ ಮಾತನಾಡಿ, ಸ್ವಇಚ್ಛೆಯಿಂದ ಕಾಂಗ್ರೆಸ್ ಪಕ್ಷ ತೊರೆದು ಶಿ‍ವಣ್ಣ ಮತ್ತಿತರರು ಬಂದಿದ್ದು, ಆದರೆ ಜಿಪಂ ಮಾಜಿ ಸದಸ್ಯರು ಕಾಂಗ್ರೆಸ್‌ ಪಕ್ಷ ತೊರೆದಿಲ್ಲ ಎಂದು ಪತ್ರಿಕೆಗಳಲ್ಲಿ ಹೇಳಿರುವುದು ಸುಳ್ಳು. ಶಿ‍‍‍ವಣ್ಣ ನವರು ನಮ್ಮ ಬೆಂಬಲದಿಂದ ಅಧ್ಯಕ್ಷರಾಗಿರುವುದೇ ಸಾಕ್ಷಿ ಎಂದರು.ನಿರ್ದೇಶಕ ದೇವರಾಜ್ ಮಾತನಾಡಿ, ಪ್ರಾಥಮಿಕ ಕೃಷಿ ಸಹಕಾರ ಸಂಘದ ಐದು ವರ್ಷಕ್ಕೊಮ್ಮೆ ನಡೆವ ಚುನಾವಣೆಯಲ್ಲಿ ಮೂರು ಬಾರಿಯಿಂದ ಅವಿರೋಧ ಆಯ್ಕೆ ನಡೆಯುತ್ತಾ ಬಂದಿದೆ.

 ಆದರೆ ಈ ಬಾರಿ 12 ನಿರ್ದೇಶಕ ಸ್ಥಾನಗಳಿಗೆ 68 ಅರ್ಜಿಗಳ ಸಲ್ಲಿಕೆ ಆಗಿತ್ತು. ಪತ್ತಿನ ಸಂಘಕ್ಕೆ ಹೋಚೀಹಳ್ಳಿ, ಚಿನಕಾರನಹಳ್ಳಿ, ಮರವಂಜಿ ಗ್ರಾಮಗಳಿಂದ ನಿರ್ದೇಶಕರು ಅವಿರೋಧ ಆಯ್ಕೆಯಾಗಿ ಬರುತ್ತಿದ್ದರು. ಆದರೆ ಕಾಂಗ್ರೆಸ್ ಜೊತೆಗಿನ ಮಾತುಕತೆ ಫಲಪ್ರದ ಆಗಲಿಲ್ಲ. ಚೇತನ್ ಕೆಂಪರಾಜ್ ರವರ ನೇತೃತ್ವದಲ್ಲಿ ಶಿವಣ್ಣನವರನ್ನು ಅಧ್ಯಕ್ಷರಾಗಿ ಮಾಡಲಾಯಿತು ಎಂದರು.

ಅಲ್ಲದೆ ಸಹಕಾರಿ ರಂಗದಲ್ಲಿ ರಾಜಕೀಯ ಬೇಡವೆಂಬ ತೀರ್ಮಾನಕ್ಕೆ ಬಂದು ರೈತರ ಅಭಿವೃದ್ಧಿಗಾಗಿ ದುಡಿಯಲು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ. ಕೆ. ಶಿವಣ್ಣರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸಂಘದಿಂದ ಶೂನ್ಯ ಬಡ್ಡಿ ದರದಲ್ಲಿ 3. ₹40 ಕೋಟಿ ಸಾಲ ವಿತರಣೆ ನಡೆದಿದೆ ಎಂದರು.

ಗ್ರಾಪಂ ಸದಸ್ಯರಾದ ಮಂಜುಳಮ್ಮ, ಮಹೇಶ್ವರಮ್ಮ, ಜಯಣ್ಣ, ಗಂಗಾಧರ್ ಮತ್ತು ಗ್ರಾಮಸ್ಥರು ಹಾಜರಿದ್ದರು.21ಕೆಕೆಡಿಯು1.ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ಜೆಡಿಎಸ್ ಯುವ ಮುಖಂಡ ಚೇತನ್ ಕೆಂಪರಾಜು ನೇತೃತ್ವದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು.