ಕೇಂದ್ರ ಸರ್ಕಾರ ಯಾವುದೇ, ಯಾರ ಬೆದರಿಕೆಗಳಿಗೆ ಮಣಿಯುವುದಿಲ್ಲ. ಕಾಂಗ್ರೆಸ್ ನಾಯಕರುಗಳ ಸುಳ್ಳು ಆರೋಪ, ದೇಶ ವಿರೋಧಿ ಧೋರಣೆ ಯಾವತ್ತೂ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಧಾರವಾಡ:ಕೇಂದ್ರ ಸರ್ಕಾರ ಯಾವುದೇ, ಯಾರ ಬೆದರಿಕೆಗಳಿಗೆ ಮಣಿಯುವುದಿಲ್ಲ. ಕಾಂಗ್ರೆಸ್ ನಾಯಕರುಗಳ ಸುಳ್ಳು ಆರೋಪ, ದೇಶ ವಿರೋಧಿ ಧೋರಣೆ ಯಾವತ್ತೂ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನಬದ್ಧ ಸಂಸ್ಥೆಗಳಿಗೆ ಅಪಮಾನ ಮಾಡುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲಾನ್ ಮಸ್ಕ್ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಭಾರತಕ್ಕೆ ಬರುವವರು ದೇಶದ ನಿಯಮ, ಸಾರ್ವಭೌಮತೆ, ಕಾನೂನಿಗೆ ಬದ್ಧರಾಗಿರಬೇಕು ಎಂದರು.ಮತದಾರರ ಪಟ್ಟಿಯಿಂದ 50 ಲಕ್ಷ ಜನರ ಹೆಸರು ಕೈಬಿಡುವ ಷಡ್ಯಂತ್ರ ಎಂಬ ಮುಖ್ಯಮಂತ್ರಿಗಳ ಆರೋಪ ತಳ್ಳಿಹಾಕಿದ ಅವರು, ಮೃತರು ಮತ್ತು ನಕಲಿ ಹೆಸರು ತೆಗೆಯುವುದು ಕಾನೂನುಬದ್ಧ ಪ್ರಕ್ರಿಯೆ. ಇದು ತಹಶೀಲ್ದಾರ್, ಎಸಿ, ಡಿಸಿ, ಚುನಾವಣಾ ಆಯೋಗದ ಮೂಲಕ ನಿಯಮಾನುಸಾರ ನಡೆಯುತ್ತಿದೆ ಎಂದು ಹೇಳಿದರು.
ಹಾಗೆಯೇ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರವಾಗಿ ಉತ್ತಮ ಪ್ರಚಾರ ನಡೆದಿದೆ. ಅವರ ಸೌಮ್ಯ ಸ್ವಭಾವ, ನಡವಳಿಕೆ, ಕಳೆದ ಎರಡು ಅವಧಿಯಲ್ಲಿ ಅವರು ಮಾಡಿರುವ ಜನಪರ ಕೆಲಸಗಳು ಅವರ ಕೈ ಹಿಡಿಯುವ ವಿಶ್ವಾಸವಿದೆ ಎಂದರು.