ಸಾರಾಂಶ
ನಾಪೋಕ್ಲು ಬೆಟ್ಟಗೇರಿ ಸಂಪರ್ಕ ರಸ್ತೆ ಕುಸಿದು ಅಪಾಯ ಮಟ್ಟಕ್ಕೆ ತಲುಪಿದ್ದು ವಾಹನ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾವಾಗಿದೆ.
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುನಾಪೋಕ್ಕು - ಬೆಟ್ಟಗೇರಿ ಸಂಪರ್ಕ ರಸ್ತೆ ಕುಸಿದು ಅಪಾಯ ಮಟ್ಟ ಕ್ಕೆ ತಲುಪಿದ್ದು ವಾಹನ ಸಂಪರ್ಕ ಸಂಪೂರ್ಣ ಸ್ಥಗಿತ ಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ನಾಪೋಕ್ಲು- ಬೆಟ್ಟಗೇರಿ ಮಡಿಕೇರಿ ಮುಖ್ಯ ಸಂಪರ್ಕ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಸಮೀಪ ರಸ್ತೆಯ ಒಂದು ಭಾಗ ಭಾರಿ ಕುಸಿದಿದ್ದು ಜೀವಪಾಯಕ್ಕೆ ಆಹ್ವಾನ ನೀಡಿದಂತಿದೆ. ಕಿರಿದಾದ ರಸ್ತೆಯ ಒಂದೇ ಭಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದು ಜೀವಾಪಾಯ ವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಈ ರಸ್ತೆ ಕಾವೇರಿ ಪ್ರವಾಹದಿಂದಮುಳುಗಡೆಯಾಗಿದ್ದು ಈ ಮಳೆಗಾಲದಲ್ಲಿಯೂ ಮುಳುಗಡೆಯಾದರೆ ರಸ್ತೆ ಸಂಪೂರ್ಣ ಕುಸಿದು ಬಾರಿ ಅನಾಹುತ ಸಂಭವಿಸುವ ಸಾಧ್ಯತೆಗಳು ಇದ್ದು ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ. ಇಲ್ಲವಾದರೆ ಊರು ಕೊಳ್ಳೆ ಹೊಡೆದ ಮೇಲೆ ದಿಂಡಿ ಬಾಗಿಲು ಹಾಕಿದಂತಾಗಿತ್ತು ಎನ್ನಲಾಗುತ್ತದೆ.