ಕೆಪಿಸಿಸಿ ಅಧ್ಯಕ್ಷ ಸ್ಥಾನ ಶೀಘ್ರದಲ್ಲೇ ಬದಲಾವಣೆ? ಸುಳಿವು ಕೊಟ್ಟ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

| N/A | Published : Feb 13 2025, 12:49 AM IST / Updated: Feb 13 2025, 06:39 AM IST

Mallikarjun Kharge
ಕೆಪಿಸಿಸಿ ಅಧ್ಯಕ್ಷ ಸ್ಥಾನ ಶೀಘ್ರದಲ್ಲೇ ಬದಲಾವಣೆ? ಸುಳಿವು ಕೊಟ್ಟ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಶೀಘ್ರದಲ್ಲೇ ಬದಲಾವಣೆ ಮಾಡುವ ಬಗ್ಗೆ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ.

 ಕಲಬುರಗಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಶೀಘ್ರದಲ್ಲೇ ಬದಲಾವಣೆ ಮಾಡುವ ಬಗ್ಗೆ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಓಡಿಸ್ಸಾದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೀನಿ ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗಲಿದೆ ಎಂದರು.

ಆದರೆ, ಬದಲಾವಣೆ ಯಾವಾಗ? ನೂತನ ಅಧ್ಯಕ್ಷರು ಯಾರು? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರವಾಗಿ ನಾನ ಹೇಳಲಿಕ್ಕೆ ಆಗಲ್ಲ .

ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡ್ತಿದಿವೆ. ಇನ್ನೂ ಒಂದು ಎರಡು ದಿನದಲ್ಲಿ ಮತ್ತೆ ಒಂದೆರಡು ಸ್ಟೇಟ್ ನಲ್ಲಿ ಮಾಡುತ್ತೇವೆಂದರೂ.

ಎಂಟು ದಿನದಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತವೆ ಎಂದೂ ಡಾ ಖರ್ಗೆ ಹೇಳಿದರಿ 8 ಸತೀಷ ಜಾರಕಿಹೊಳಿ ಭೇಟಿ ವಿಚಾರ ದೊಡ್ಡ ಮಾತಾ ?

ನಾನು ಎಐಸಿಸಿ ಅಧ್ಯಕ್ಷ.. ಎಲ್ಲರೂ ಬಂದು ಭೇಟಿ ಮಾಡ್ತಾರೆ ಇದು ದೊಡ್ಡ ಮಾತಾ ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು

ನಮ್ಮ‌ ರಾಜ್ಯದವರಿಗೆ ಬೇಗನನ್ನ ಅಪಾಯಿಂಟಮೆಂಟ್ ಸಿಗುತ್ತೆ.. ಬರ್ತಾರೆ ಬಂದವರಿಗೆ ಭೇಟಿ ಮಾಡಲು ಬೇಡ ಅನ್ನಲು ಆಗುತ್ತಾ ?ಎಲ್ಲರೂ ಬಂದು ಭೇಟಿ ಆಗ್ತಾರೆ., ಪರಮೇಶ್ವರ ಬರ್ತಾರೆ, ಡಿಕೆ ಶಿವಕುಮಾರ ಬರ್ತಾರೆ, ಸತೀಶ ಜಾರಕಿಹೊಳಿ ಬರ್ತಾರೆ, ಸಿದ್ರಾಮಯ್ಯ ಫೋನ್ ಮಾಡ್ತಾರೆ, ಇದರಲ್ಲಿ ವಿಶೇಷ ಏನಿಲ್ಲ ಎಂದರು.

ಇದರಲ್ಲಿ ಉಹಾಪೋಹ ಸೃಷ್ಟಿಸಿ ಗೊಂದಲ ಸೃಷ್ಟಿ ಮಾಡಬೇಡಿ, ಇದರಿಂದ ನಮ್ಮ ನಾಯಕರೂ ಗೊಂದಲಕ್ಕೆ ಒಳಗಾಗುತ್ತಿದ್ದಾರ ಎಂದೂ ಅಧ್ಯಕ್ಷ ಡಾ ಖರ್ಗೆ ಹೇಳಿದರು.