ಶ್ರೀನಿವಾಸ ಬಬಲಾದಿಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ, ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ಪಟ್ಟಣದ ಸಾರ್ವಜನಿಕರಲ್ಲಿ ಮೂಡಿದೆ.
ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ, ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ಪಟ್ಟಣದ ಸಾರ್ವಜನಿಕರಲ್ಲಿ ಮೂಡಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಹಗಲು ರಾತ್ರಿಯೂ ರಸ್ತೆ ಮೇಲೆ ಅಡ್ಡಾಡುತ್ತವೆ. ಇಲ್ಲವೆ ಮಲಗುತ್ತವೆ. ಮಾಲೀಕರು ತಮ್ಮ ಹಸುಗಳ ಹಾಲು ಕರೆದುಕೊಂಡು ರಸ್ತೆಗೆ ಬಿಡುವ ಪ್ರವೃತ್ತ ಹೆಚ್ಚು. ರಸ್ತೆ ಮೇಲೆ ತಿರುಗಾಡುವುದರಿಂದ ಅನೇಕ ವಾಹನಗಳ ಸವಾರರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೀದಿದೀಪಗಳೇ ಇಲ್ಲ. ರಾತ್ರಿ ಹೊತ್ತಿನಲ್ಲಿ ವಾಹನಗಳ ಬೆಳಕಿನಲ್ಲಿ ದನಗಳ ಮಲಗಿರುವುದು ಕಂಡು ಬರದ ಕಾರಣ ದೊಡ್ಡ ವಾಹನಗಳು ದನಗಳಿಗೆ ಡಿಕ್ಕಿ ಹೊಡೆದ ಹೋಗುತ್ತಾರೆ. ದನಗಳು ಗಾಯಗೊಂಡಿವೆ.ಬಿಡಾಡಿ ದನಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಪಪಂ ತೆಗೆದುಕೊಂಡಿಲ್ಲ. ಅನೇಕ ಬಾರಿ ದನಗಳ ಮಾಲೀಕರಿಗೆ ಸೂಚನೆ ನೀಡಿದರು, ಯಾವುದೇ ಪ್ರಯೋಜನವಾಗಿಲ್ಲ.
ಕ್ಯಾರೆ ಎನ್ನದ ಮಾಲೀಕರು: ಸಾರ್ವಜನಿಕರಿಂದ ದೂರುಗಳ ಬಂದ ಸಂದರ್ಭದಲ್ಲಿ ಗ್ರಾಪಂನಿಂದ ಮಾಲೀಕರಿಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಆದರೆ, ದನದ ಮಾಲೀಕರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಬಿಡಾಡಿ ದನಗಳ ನಿಯಂತ್ರಣಕ್ಕೆ ಕಠಿಣ ಕ್ರಮವನ್ನು ಇದುವರೆಗೂ ಸಾಧ್ಯವಾಗುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.ಪ್ಲಾಸ್ಟಿಕ್ ತಿನ್ನುತ್ತಿರುವ ಬಿಡಾಡಿ ದನಗಳು: ಸರಿಯಾಗಿ ದನಗಳಿಗೆ ಆಹಾರ ವಿಲ್ಲದೆ ಕಾರಣ ಪ್ಲಾಸ್ಟಿಕ್ ತಿನ್ನುತ್ತಿರುವು ಕಂಡು ಬಂದಿದೆ. ಪ್ಲಾಸ್ಟಿಕ್ ತಿನ್ನುತ್ತಿರುವುದರಿಂದ ಬಿಡಾಡಿ ದನಗಳು ತಮ್ಮ ಪ್ರಾಣವನ್ನೇ ತ್ಯಜೀಸಿದೆ ಉದಾಹರಣಿಗಳಿವೆ.ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಕಾಯಿಪಲ್ಲೆ ಮಾರ್ಕೇಟ್, ಪೇಪರ ಬಂಡಲ್ ಮೇಲೆ, ಮೇನ ಬಜಾರ, ಸರ್ಕಾರಿ ದವಾಖಾನೆ, ದುರ್ಗಾದೇವಿ ದೇವಸ್ಥಾನ ಆವರಣ, ಶಾಲಾ ಆವರಣ, ಜನತಾ ಪ್ಲಾಟ ರಸ್ತೆ, ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಡಾಡಿ ದನಗಳೇ ಹೆಚ್ಚಾಗಿ ಕಂಡುಬರುತ್ತವೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೆಚ್ಚಿನ ಗಮನಹರಿಸದೇ ಇರುವುದು ವಿಪರ್ಯಾಸವಾಗಿದೆ. ಇನ್ನಾದರೂ ಪಪಂ ಅಧಿಕಾರಿಗಳು ಬಿಡಾಡಿ ದನಗಳ ತಡೆಯಲು ಮುಂದಾಗುತ್ತದೆ ಎಂಬುದು ಕಾದು ನೋಡಬೇಕಿದೆ.
ಸಂಬಂಧಪಟ್ಟ ದನಗಳ ಮಾಲೀಕರು ಕರುಣಿ ತೋರಿ ದನಗಳನ್ನು ತಮ್ಮ ಮನೆ ಮುಂದೆ ಕಟ್ಟಿಕೊಳ್ಳಲಿ ಅಥವಾ ಗೋ ಶಾಲೆಗೆ ಬಿಡಲಿ ಇದು ಕೊನೆಯ ಎಚ್ಚರಿಕೆ.
-ಸಾಬಣ್ಣಾ ಪೂಜೇರ, ಪಪಂ ಮುಖ್ಯಾಧಿಕಾರಿ, ಲೋಕಾಪುರದನಗಳ ಸಲುವಾಗಿ ಗ್ರಾಮದಲ್ಲಿ ಡಂಗುರ ಸಾರಿ ದನಗಳ ಮಾಲೀಕರಿಗೆ ಹೇಳಿದ್ದೇವೆ. ಮುಂದೆ ಹಾಗೆ ರಸ್ತೆಯಲ್ಲಿ, ಎಲ್ಲಿಬೇಕಾದರೂ ಅಡ್ಡಾಡಿ ಬೈಕಸವಾರರಿಗೆ ತೊಂದರೆ ಕೊಡುವುದು, ಸಂತೆಯಲ್ಲಿ ಸಾರ್ವಜನಿಕರಿಗೆ ಹಾದು ತೊಂದರೆ ಅನುಭವಿಸಿದ್ದು ಕಂಡು ಬಂದಿವೆ. ಇನ್ನಾದರೂ ಸಾರ್ವಜನಿಕರು ತಮ್ಮ ದನಗಳನ್ನು ತಮ್ಮ ತಮ್ಮ ವಠಾರದಲ್ಲಿ, ಮನೆಗಳಲ್ಲಿ, ತೋಟಗಳಲ್ಲಿ ಕಟ್ಟಿಕೊಳ್ಳಿ ಮುಂದೆ ಆಗುವ ತೊಂದರೆ ದನಗಳ ಮಾಲೀಕರೇ ಹೊಣಿಗಾರರು.-ಸ್ಥಳೀಯ ಸಾರ್ವಜನಿಕರು