ಪಕ್ಷಭೇದವಿಲ್ಲದೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವೆ

| Published : May 24 2024, 12:52 AM IST

ಸಾರಾಂಶ

ಹೊಸಕೋಟೆ: ನನ್ನ ಅಧಿಕಾರಾವಧಿಯಲ್ಲಿ ನಮ್ಮ ಗ್ರಾಮ ಪಂಚಾಯ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲೂ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಸೌಲಭ್ಯ, ಬೀದಿ ದೀಪಗಳು ಸೇರಿದಂತೆ ಎಲ್ಲಾ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಕಲ್ಕುಂಟೆ ಅಗ್ರಹಾರ ಗ್ರಾಪಂ ನೂತನ ಅಧ್ಯಕ್ಷ ನಾರಾಯಣಕೆರೆ ಸಿ.ಬಾಲಸುಂದರ್ ತಿಳಿಸಿದರು.

ಹೊಸಕೋಟೆ: ನನ್ನ ಅಧಿಕಾರಾವಧಿಯಲ್ಲಿ ನಮ್ಮ ಗ್ರಾಮ ಪಂಚಾಯ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲೂ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಸೌಲಭ್ಯ, ಬೀದಿ ದೀಪಗಳು ಸೇರಿದಂತೆ ಎಲ್ಲಾ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಕಲ್ಕುಂಟೆ ಅಗ್ರಹಾರ ಗ್ರಾಪಂ ನೂತನ ಅಧ್ಯಕ್ಷ ನಾರಾಯಣಕೆರೆ ಸಿ.ಬಾಲಸುಂದರ್ ತಿಳಿಸಿದರು.

ತಾಲೂಕಿನ ಕಲ್ಕುಂಟೆ ಗ್ರಾಮ ಪಂಚಾಯ್ತಿಯಲ್ಲಿ ಹಮ್ಮಿಕೊಂಡಿದ್ದ ಅಧ್ಯಕ್ಷ ಚುನಾವಣೆಯಲ್ಲಿ ಒಟ್ಟು 13 ಸದಸ್ಯರ ಸಂಖ್ಯಾಬಲ ಹೊಂದಿದ್ದು ಬಿಜೆಪಿ ಬೆಂಬಲಿತ ೯ ಹಾಗು ಕಾಂಗ್ರೆಸ್ ಬೆಂಬಲಿತ 4 ಸದಸ್ಯರಿದ್ದು ಬಿಜೆಪಿ ಬೆಂಬಲಿತ ಸಿ.ಬಾಲಸುಂದರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಸಿ.ಬಾಲಸುಂದರ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಚಂದ್ರಶೇಖರ್ ಘೋಷಿಸಿ ಆದೇಶ ಹೊರಡಿಸಿದರು.

ನೂತನ ಅಧ್ಯಕ್ಷ ಸಿ.ಬಾಲಸುಂದರ್ ಮಾತನಾಡಿ, ಅಧ್ಯಕ್ಷನಾಗಲು ಸಹಕಾರ ನೀಡಿದ ಮಾಜಿ ಸಚಿವ ಎಂಟಿಬಿ ನಾಗರಾಜಣ್ಣ ಹಾಗು ಗ್ರಾಪಂ ಸದಸ್ಯರು, ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಹಾಗು ನನ್ನ ಅಧಿಕಾರಾವಧಿಯಲ್ಲಿ ನಮ್ಮ ಗ್ರಾಮ ಪಂಚಾಯ್ತಿಗೆ ಒಳಪಡುವ ಎಲ್ಲಾ ಗ್ರಾಮಗಳನ್ನು ಅಭಿವೃದ್ದಿಪಡಿಸುತ್ತೇನೆ ಎಂದರು,

ಜಿಪಂ ಮಾಜಿ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ಸಿ.ಬಾಲಸುಂದರ್ ಅವರನ್ನು ಎಲ್ಲಾ ಗ್ರಾಪಂ ಸದಸ್ಯರು ಅವಿರೋಧ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಈ ವೇಳೆ ಅನುಗೊಂಡಹಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್, ಜಿಪಂ ಮಾಜಿ ಸದಸ್ಯ ಸಿ.ನಾಗರಾಜು, ಕೊರಳೂರು ಶಂಕರೇಗೌಡ, ಯುವ ಮುಖಂಡ ಬೋಧನಹೊಸಹಳ್ಳಿ ಸೊಣ್ಣೇಗೌಡ, ಸಿದ್ದನಪುರ ರಘು, ಕಲ್ಕುಂಟೆ ಲಕ್ಷ್ಮಣ್, ಬ್ಯಾಲಹಳ್ಳಿ ಹೇಮಂತ್, ಮರಿಯಪ್ಪ, ಗುಂಡೂರು ಶೇಖರ್, ಗಣಗಲೂರು ಮೀನುಸಾಬ್, ಅರೆಹಳ್ಳಿ ಮಂಜುನಾಥ್, ಮುನಿರಾಜು, ಬಾಗೂರು ಶ್ರೀನಿವಾಸ್‌ ಹಾಜರಿದ್ದರು.ಫೋಟೋ: 23 ಹೆಚ್‌ಎಸ್‌ಕೆ 5

ಹೊಸಕೋಟೆ ತಾಲೂಕಿನ ಕಲ್ಕುಂಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾರಾಯಣಕೆರೆ ಬಾಲಸುಂದರ್ ಅವರಿಗೆ ಗ್ರಾಪಂ ಸದಸ್ಯರು ಹಾಗು ಮುಖಂಡರು ಅಭಿನಂದನೆ ಸಲ್ಲಿಸಿದರು.