ನನ್ನನ್ನು ಗೆಲ್ಲಿಸಿದಂತೆ ತುಕಾರಾಂರನ್ನು ಗೆಲ್ಲಿಸಿ: ಶಾಸಕ ಶ್ರೀನಿವಾಸ

| Published : Apr 02 2024, 01:00 AM IST

ನನ್ನನ್ನು ಗೆಲ್ಲಿಸಿದಂತೆ ತುಕಾರಾಂರನ್ನು ಗೆಲ್ಲಿಸಿ: ಶಾಸಕ ಶ್ರೀನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿಯನ್ನು ಮತ್ತೊಮ್ಮೆ ತೋರಿಸೋಣ. ಇದಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರು ಸಾಬೀತು ಮಾಡೋಣ.

ಕೂಡ್ಲಿಗಿ: ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ ರೀತಿಯೇ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಅವರು ತಾಲೂಕಿನ ಕಾನಹೊಸಹಳ್ಳಿಯ ಗಾಣಿಗರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿಯನ್ನು ಮತ್ತೊಮ್ಮೆ ತೋರಿಸೋಣ. ಇದಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರು ಸಾಬೀತು ಮಾಡೋಣ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರು, ಮಹಿಳೆಯರು, ನಿರುದ್ಯೋಗಿಗಳು ಸೇರಿ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದೆ. ಇಂಥ ಯೋಜನೆಗಳು ದೇಶದಲ್ಲೇ ಮಾದರಿಯಾಗಿದೆ. ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈ.ತುಕಾರಾಂ ಅವರನ್ನು ಗೆಲ್ಲಿಸಿ ಕೈಗೆ ಶಕ್ತಿ ತುಂಬಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಾವಲ್ಲಿ ಶಿವಪ್ಪನಾಯಕ, ನಾಗಮಣಿ ಜಿಂಕಲ್, ಒಬಿಸಿ ರಾಜ್ಯ ಮುಖಂಡ ಲಕ್ಕಜ್ಜಿ ಮಲ್ಲಿಕಾರ್ಜುನ, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ಎನ್.ಟಿ.ತಮ್ಮಣ್ಣ, ಕೆಪಿಸಿಸಿ ಕಾರ್ಯದರ್ಶಿ ಟಿ.ಉಮೇಶ್ ಎನ್.ವಿ.ತಮ್ಮಣ್ಣ, ಬಣವಿಕಲ್ಲು ಎರಿಸ್ವಾಮಿ, ತೂಲಹಳ್ಳಿ ಶಾಂತನಗೌಡ, ಎಚ್.ಕೆ. ವೆಂಕಟೇಶ್ವರ ರಾವ್, ಪೇಪರ್ ಸೂರಯ್ಯ, ಜಿ.ಓಬಣ್ಣ, ಹುಡೇಂ ಪಾಪನಾಯಕ, ಬಿ.ಟಿ. ಗುದ್ದಿ ದುರುಗೇಶ್, ಎಳನೀರು ಗಂಗಣ್ಣ, ಮಡಿವಾಳ ಮಾರೇಶ್, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಬೋರಣ್ಣ, ದುಗ್ಗಪ್ಪ, ಶರಣನಗೌಡ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಅಜ್ಜನಗೌಡ ಸೇರಿ ಇತರರಿದ್ದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾಂಗ್ರೆಸ್‌ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.