ಗಾಳಿ ಮಳೆಗೆ ಜಿಲ್ಲೆಯ 4303 ವಿದ್ಯುತ್‌ ಕಂಬಗಳಿಗೆ ಹಾನಿ

| Published : Aug 01 2025, 12:00 AM IST

ಸಾರಾಂಶ

ಚಿಕ್ಕಮಗಳೂರುಸತತ ಮಳೆ, ಭಾರೀ ಗಾಳಿಯನ್ನು ಕೆಲವು ದಿನಗಳ ಹಿಂದೆ ಕಂಡ ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 4303 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮೆಸ್ಕಾಂಗೆ ಈವರೆಗೆ ₹7.38 ಕೋಟಿ ರು. ನಷ್ಟವಾಗಿದೆ.

- ಇಂದಿಗೂ ವಿದ್ಯುತ್‌ ಕಾಣದ ಕುಗ್ರಾಮಗಳು । 4 ತಿಂಗಳಲ್ಲಿ ₹7.38 ಕೋಟಿ ನಷ್ಟ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸತತ ಮಳೆ, ಭಾರೀ ಗಾಳಿಯನ್ನು ಕೆಲವು ದಿನಗಳ ಹಿಂದೆ ಕಂಡ ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 4303 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮೆಸ್ಕಾಂಗೆ ಈವರೆಗೆ ₹7.38 ಕೋಟಿ ರು. ನಷ್ಟವಾಗಿದೆ.

ಜಿಲ್ಲೆಯ 9 ತಾಲೂಕುಗಳ ಪೈಕಿ ಅತಿ ಹೆಚ್ಚು ಮಳೆ ಬಿದ್ದಿರುವುದು ಚಿಕ್ಕಮಗಳೂರು ತಾಲೂಕಿನಲ್ಲಿ ಅಂದರೆ, ಶೇ.135 ರಷ್ಟು ಮಳೆಯಾಗಿದೆ. ಅದೇ ಪ್ರಮಾಣದಲ್ಲಿ ಮೆಸ್ಕಾಂಗೆ ಸಂಬಂಧಿಸಿದಂತೆ ಇದೊಂದೇ ತಾಲೂಕಿನಲ್ಲಿ 1706 ವಿದ್ಯುತ್‌ ಕಂಬಗಳು ಬಿದ್ದಿದ್ದರೆ, 34.12 ಕಿ.ಮೀ. ವಿದ್ಯುತ್‌ ತಂತಿಗಳಿಗೆ ಹಾನಿ ಸಂಭವಿಸಿದೆ.

ಕಳೆದ ಒಂದು ವಾರದಿಂದ ಮಳೆ ಇಳಿಮುಖವಾಗಿದೆ. ಆದರೆ, ಗಾಳಿಯ ಆರ್ಭಟ ಇಂದಿಗೂ ಮುಂದುವರಿದಿದೆ. ಚಿಕ್ಕ ಮಗಳೂರು ನಗರದಲ್ಲಿ ಗಂಟೆಗೆ 35 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿತ್ತು. ಮನೆಗಳಿಂದ ಹೊರಗೆ ಬರಲು ಜನರು ಭಯ ಪಡುತ್ತಿದ್ದರೆ, ದ್ವಿಚಕ್ರ ವಾಹನಗಳಲ್ಲಿ ಸಾಗುವಾಗ ಬೈಕ್‌ಗಳು ಹತೋಟಿಗೆ ಸಿಗದೆ ರಸ್ತೆಗಳ ಮೇಲೆ ತೇಲುವಂತೆ ಮುಂದೆ ಸಾಗುತ್ತಿದ್ದವು.

ಮಲೆನಾಡಿನ ಹಲವೆಡೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ಚಿಕ್ಕಮಗಳೂರು ಸೇರಿದಂತೆ ಕೊಪ್ಪ, ಶೃಂಗೇರಿ, ಮೂಡಿಗೆರೆ ಹಾಗೂ ಕಳಸ ತಾಲೂಕು ಕೇಂದ್ರಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ವಿದ್ಯುತ್‌ ಸಂಪರ್ಕ ದಲ್ಲಿ ವ್ಯತ್ಯಯ ಉಂಟಾಗಿತ್ತು. ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಕುಗ್ರಾಮಗಳಲ್ಲಿ ಇಂದಿಗೂ ಕೂಡ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ಬಿದ್ದಿರುವ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಹಾಕುವ ಪ್ರಕ್ರಿಯೆಗೆ ಮಳೆ ಅಡ್ಡಿಪಡಿಸಿತ್ತು. ಆದರೂ ಕೂಡ ಜಿಲ್ಲೆಯಲ್ಲಿ ಧರೆಗುರುಳಿ ಬಿದ್ದಿರುವ 4303 ವಿದ್ಯುತ್‌ ಕಂಬಗಳ ಪೈಕಿ ಈವರೆಗೆ 3780 ಕಂಬಗಳನ್ನು ಬದಲಾ ವಣೆ ಮಾಡಲಾಗಿದೆ. ತುಂಡಾಗಿರುವ 86.06 ಕಿ.ಮೀ. ವಿದ್ಯುತ್‌ ಲೈನ್‌ಗಳ ಪೈಕಿ 75.60 ಕಿ.ಮೀ. ಲೈನ್ ದುರಸ್ತಿ ಗೊಳಿಸ ಲಾಗಿದೆ. ಸದ್ಯ ಮಳೆ ಬಿಡುವು ನೀಡಿದ್ದರಿಂದ ಈ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

-- ಬಾಕ್ಸ್‌--

---------------------------------------------------------------------------------

ತಾಲೂಕುಹಾಳಾಗಿರುವಬದಲಾಯಿಸಿರುವ ಕಂಬಗಳು

----------------------------------------------------------------

ಚಿಕ್ಕಮಗಳೂರು17061504

---------------------------------------------------------------

ಮೂಡಿಗೆರೆ361349

----------------------------------------------------------

ಕಳಸ292 289

--------------------------------------------------------

ಕಡೂರು227 227

---------------------------------------------------

ತರೀಕೆರೆ105 105

-----------------------------------------------------

ಅಜ್ಜಂಪುರ52 52

--------------------------------------------------

ಎನ್‌.ಆರ್‌.ಪುರ675 536

----------------------------------------------------------------------------

ಕೊಪ್ಪ 620462

----------------------------------------------------

ಶೃಂಗೇರಿ 265 256

-----------------------------------------------

ಒಟ್ಟು 43033780

--------------------------------------------31 ಕೆಸಿಕೆಎಂ 1ಇತ್ತೀಚೆಗೆ ಸೇರಿದ ಭಾರೀ ಮಳೆ ಹಾಗೂ ಗಾಳಿಗೆ ಧರೆಗುರುಳಿದ ವಿದ್ಯುತ್‌ ಕಂಬ.