ಸಾರಾಂಶ
ಬೆಳಗಾವಿ ಮತ್ತು ಖಾನಾಪುರದಲ್ಲಿ ಮಂಗಳವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬಿರುಗಾಳಿ ಸಮೇತ ಮಳೆ ಆಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಮಳೆ ಸುರಿದಿದೆ. ಗಾಳಿ ಮಳೆಗೆ ಕೆಲವೆಡೆ ತಗಡಿನ ಶೆಡ್‌ಗಳು ಹಾರಿಹೋಗಿವೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಮತ್ತು ಖಾನಾಪುರದಲ್ಲಿ ಮಂಗಳವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬಿರುಗಾಳಿ ಸಮೇತ ಮಳೆ ಆಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಮಳೆ ಸುರಿದಿದೆ. ಗಾಳಿ ಮಳೆಗೆ ಕೆಲವೆಡೆ ತಗಡಿನ ಶೆಡ್‌ಗಳು ಹಾರಿಹೋಗಿವೆ.ಕಳೆದ ಮೂರು ದಿನಗಳಿಂದ ಬಿಸಿಲಿನ ಪ್ರಖರತೆ ತೀವ್ರವಾಗಿತ್ತು. ಮೋಡ ಇದ್ದರೂ ಮಳೆ ಆಗಿರಲಿಲ್ಲ. ಇದರಿಂದಾಗಿ ಸೆಖೆ ತೀವ್ರವಾಗಿತ್ತು. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಗೆ ಮಂಗಳವಾರ ಸುರಿದ ಮಳೆ ತಂಪೇರೆಯಿತು. ಮಧ್ಯಾಹ್ನ ಜೋರಾಗಿ ಸುರಿದ ಮಳೆ ಬಳಿಕ ಜಿಟಿ ಜಿಟಿಯಾಗಿ ಸುರಿದಿದೆ. ಗಣೇಶಪುರದ ಮಹಾಲಕ್ಷ್ಮೀ ನಗರದ ಹತ್ತಿರದ ಎಡಬ್ಲ್ಯುಎಚ್ ಕ್ವಾಟರ್ಸ್ ಹಿಂಭಾಗದಲ್ಲಿ ಮರವೊಂದಕ್ಕೆ ಸಿಡಿಲು ಬಡಿದಿದ್ದು, ಮರವು ಛಿದ್ರ ಛಿದ್ರವಾಗಿ ಮುರಿದು ಬಿದ್ದಿದ್ದಲ್ಲದೇ ಸನಿಹದಲ್ಲಿರುವ ಮನೆಯ ಗ್ಲಾಸ್ ಒಡೆದಿರುವುದು ನಿವಾಸಿಗಳಲ್ಲಿ ಭಯಭೀತಿಯನ್ನುಂಟು ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
;Resize=(128,128))
;Resize=(128,128))
;Resize=(128,128))
;Resize=(128,128))