ಸಾರಾಂಶ
ಬೇಸಿಗೆ ಬಿರುಬಿಸಿಲಿನಿಂದ ಇಡೀ ತಾಲೂಕಿನಲ್ಲಿ ಭೂಮಿ ಕಾದ ಕಾವಲಿಯಂತಾಗಿದ್ದು, ಬಿಸಿಲಿನ ಧಗೆಗೆ ಜನ ಹೈರಾಣಾಗಿದ್ದರು. ಶನಿವಾರ ರಾತ್ರಿ ತಾಲೂಕಿನಾದ್ಯಂತ ಬಿರುಸಿನ ಗಾಳಿಸಹಿತ ಕೆಲ ಸಮಯ ಸುರಿದ ಮುಂಗಾರು ಪೂರ್ವ ಮಳೆ ಸ್ವಲ್ಪಮಟ್ಟಿನ ತಂಪು ವಾತಾವರಣ ಸೃಷ್ಠಿಸಿತು.
ಹೊನ್ನಾಳಿ: ಬೇಸಿಗೆ ಬಿರುಬಿಸಿಲಿನಿಂದ ಇಡೀ ತಾಲೂಕಿನಲ್ಲಿ ಭೂಮಿ ಕಾದ ಕಾವಲಿಯಂತಾಗಿದ್ದು, ಬಿಸಿಲಿನ ಧಗೆಗೆ ಜನ ಹೈರಾಣಾಗಿದ್ದರು. ಶನಿವಾರ ರಾತ್ರಿ ತಾಲೂಕಿನಾದ್ಯಂತ ಬಿರುಸಿನ ಗಾಳಿಸಹಿತ ಕೆಲ ಸಮಯ ಸುರಿದ ಮುಂಗಾರು ಪೂರ್ವ ಮಳೆ ಸ್ವಲ್ಪಮಟ್ಟಿನ ತಂಪು ವಾತಾವರಣ ಸೃಷ್ಠಿಸಿತು.
ಭಾರಿ ಗಾಳಿಗೆ ಸರ್ವರ ಕೇರಿ ರಸ್ತೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿತು. ಪರಿಣಾಮ ವಿದ್ಯುತ್ ಕಂಬ ಮುರಿದು ರಸ್ತೆಗೆ ವಾಲಿದೆ. ಗಾಳಿ-ಮಳೆ ಕಾರಣ ಬೆಸ್ಕಾಂ ಮುಂಚಿತವಾಗಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದರಿಂದ ಯಾವುದೇ ಅನಾಹುತವಾಗಿಲ್ಲ. ಭಾನುವಾರ ಬೆಳಗ್ಗೆ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಕಂಬದ ವ್ಯವಸ್ಥೆ ಸರಿಪಡಿಸಿದ್ದಾರೆ.ಶನಿವಾರ ರಾತ್ರಿಯ ಮಳೆಗೆ ಹೊನ್ನಾಳಿಯಲ್ಲೇ 3, ಹರಗನಹಳ್ಳಿ ಕುಡಿಯುವ ನೀರು ಸರಬರಾಜು ಕೇಂದ್ರದ ಸಮೀಪ 2, ಕುಂದೂರು, ಮುಕ್ತೇನಹಳ್ಳಿ, ಹಾಗೂ ಕೂಲಂಬಿ ಗ್ರಾಮಗಳಲ್ಲಿ ತಲಾ 1ರಂತೆ ಒಟ್ಟು 8 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಇದರಿಂದ ಬೆಸ್ಕಾಂಗೆ ₹1.5 ಲಕ್ಷ ನಷ್ಟವಾಗಿದೆ ಎಂದು ಅಧಿಕಾರಿ ಜಯಪ್ಪ ತಿಳಿಸಿದ್ದಾರೆ.