ಮಂಗಳೂರಿನಲ್ಲಿ ದ್ರಾಕ್ಷಾರಸ ಮೇಳಕ್ಕೆ ಚಾಲನೆ

| Published : Dec 22 2023, 01:30 AM IST

ಸಾರಾಂಶ

ಗುರುವಾರ ಸಂಜೆ ಮಂಗಳೂರಿನಲ್ಲಿ ವೈನ್ ಮೇಳವನ್ನು ರೋಹನ್ ಕಾರ್ಪೊರೇಶನ್‌ನ ರೋಹನ್‌ ಮೋಂತೆರೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೈನ್‌ ಮೇಳ ಆಯೋಜಿಸುವುದರಿಂದ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜನರಿಗೂ ಗುಣಮಟ್ಟದ ವೈನ್‌ ದೊರೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಬೋರ್ಡ್‌ ನಿರ್ದೇಶನದಲ್ಲಿ ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಬೃಹತ್‌ ದ್ರಾಕ್ಷಾರಸ ಪ್ರದರ್ಶನ ಮತ್ತು ಮಾರಾಟ ಮೇಳ ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿರುವ ರೋಹನ್‌ ಸಿಟಿ ಸ್ಕ್ವೇರ್‌ ಕಟ್ಟಡದಲ್ಲಿ ಗುರುವಾರ ಆರಂಭವಾಗಿದೆ. ಡಿ.24ರವರೆಗೆ ಈ ವೈನ್‌ ಮೇಳ ನಡೆಯಲಿದೆ.ಗುರುವಾರ ಸಂಜೆ ಮೇಳವನ್ನು ರೋಹನ್ ಕಾರ್ಪೊರೇಶನ್‌ನ ರೋಹನ್‌ ಮೋಂತೆರೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೈನ್‌ ಮೇಳ ಆಯೋಜಿಸುವುದರಿಂದ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜನರಿಗೂ ಗುಣಮಟ್ಟದ ವೈನ್‌ ದೊರೆಯಲಿದೆ ಎಂದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಮುಂದೆಯೂ ಎಲ್ಲೆಡೆ ವೈನ್‌ ಮೇಳಗಳು ನಡೆದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಉದ್ಯಮಿಗಳಾದ ರಮೇಶ್‌ ನಾಯಕ್‌, ಸುಧಾಕರ ನಾಯಕ್‌ ಮತ್ತಿತರರಿದ್ದರು. ಮೇಳದಲ್ಲಿ ರಾಜ್ಯದ ವಿವಿಧೆಡೆಗಳ ವೈನ್‌ ತಯಾರಕರ 25ಕ್ಕೂ ಅಧಿಕ ಸ್ಟಾಲ್‌ಗಳನ್ನು ಹಾಕಲಾಗಿದೆ.