ಉತ್ತಮ ಆರೋಗ್ಯ ಇದ್ದರೆ ಎನಾದರೂ ಸಾಧಿಸಲು ಸಾಧ್ಯ

| Published : Jan 11 2024, 01:31 AM IST

ಉತ್ತಮ ಆರೋಗ್ಯ ಇದ್ದರೆ ಎನಾದರೂ ಸಾಧಿಸಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಯಾರೂ ದುಶ್ಚಟಗಳಿಗೆ ಬಲಿಯಾಗಬಾರದು.

ಕಮಲನಗರ: ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಯಾರೂ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಡಾ.ಶಾಲಿವಾನ್ ಉದಗಿರೆ ಹೇಳಿದರು.

ಬುಧವಾರ ತಾಲೂಕಿನ ಠಾಣಾ ಕುಶನೂರ್ ಜ್ಯೋತಿ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಮೊದಲು ಉತ್ತಮ ನಡವಳಿಕೆ ಕಲಿಯಬೇಕು. ಉತ್ತಮ ಗುಣಗಳನ್ನು ಹೊಂದಬೇಕು. ಚಿಕ್ಕ ವಯಸ್ಸಿನಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗಬಾರದು. ಮನೆಯಲ್ಲಿ ಯಾರಾದರೂ ಕೆಟ್ಟ ಚಟಗಳಿಗೆ ಬಲಿ ಆದರೇ ಮಕ್ಕಳು ಅದನ್ನು ಬಿಡಿಸುವ ಪಣ ತೊಡಬೇಕು ಎಂದರು.

ಅಲ್ಲದೇ ಉತ್ತಮ ಸಂಸ್ಕಾರ ಪಡೆದು ಧ್ಯಾನ, ಯೋಗ, ಪೂಜೆ, ಮಾಡಿ ಬದುಕು ಬಂಗಾರವಾಗಿಸಿ ಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡ ಮಾತನಾಡಿ, ಮದ್ಯಪಾನ, ಧೂಮಪಾನದಿಂದ ದೂರವಿರುವ ಮೂಲಕ ಮನೆಯಲ್ಲಿ ಒಳ್ಳೆಯ ವಾತಾವರಣವಿರುವಂತೆ ನೋಡಿಕೊಳ್ಳಬೇಕು.

ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪ್ರೀತಿ ವಿಶ್ವಾಸದಿಂದ ಪಾಠ ಮಾಡಿ ಅವರಲ್ಲಿನ ಪ್ರತಿಭೆ ಬೆಳಕಿಗೆ ತರುವಲ್ಲಿ ಶ್ರಮ ವಹಿಸಿ ಅವರಲ್ಲಿ ಅಘಾಧವಾಗಿ ಅಡಗಿರುವ ಪ್ರತಿಭೆ ಬೆಳಕಿಗೆ ತರಬೇಕು. ಪ್ರತಿಯೊಬ್ಬರಿಗೆ ಕೆಟ್ಟ ಚಟಗಳ ಬಗ್ಗೆ ಮಾಹಿತಿ ನೀಡಿ ಅವುಗಳಿಂದ ದೂರ ವಿರುವಂತೆ ತಿಳಿಸಬೇಕೆಂದರು.

ಮುಖ್ಯಗುರು ರಾಜಕುಮಾರ್ ನೀಡೋದೇ, ಅಖಿಲಕರ್ನಾಟಕ ಜನಜಾಗ್ರತಿ ವೇದಿಕೆ ಜಿಲ್ಲಾ ಸದಸ್ಯ ಮಲ್ಲಪ್ಪ ಗೌಡ, ಜ್ಯೋತಿ, ಮಾರುತಿ ದೇವಕತ್ತೆ, ಸಂಗ್ರಾಮ ಪವಾರ, ನಾಗನಾಥ ನಿಟ್ಟೂರೆ, ರಾಮರಾವ್ ಬೈರಾಳೆ, ವಸಂತ್ ಪವಾರ, ಸುನಿಲ್ ಗಾಯಕ ವಾಡ್, ಅಂಕುಶ್ ವಡ್ದೆ, ಭಾಗ್ಯಶ್ರೀ ಇತರರಿದ್ದರು. ವಲಯ ಮೇಲ್ವಿಚಾರಕ ವಿಲಾಸ ಪೂಜಾರಿ ನಿರೂಪಿಸಿ ವಂದಿಸಿದರು.