ಪ್ರೀತಿ, ವಿಶ್ವಾಸದಿಂದ ಎಲ್ಲವನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಘರ್ಷಣೆಗಳು ನಮ್ಮನ್ನು ಇನ್ನಷ್ಟು ಗಾಸಿಗೊಳಿಸುತ್ತವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಹಾನಗಲ್ಲ ಕೇಂದ್ರದ ಸಂಚಾಲಕಿ ಬಿ.ಕೆ. ಶೈಲಜಾ ಹೇಳಿದರು.
ಹಾನಗಲ್ಲ: ಪ್ರೀತಿ, ವಿಶ್ವಾಸದಿಂದ ಎಲ್ಲವನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಘರ್ಷಣೆಗಳು ನಮ್ಮನ್ನು ಇನ್ನಷ್ಟು ಗಾಸಿಗೊಳಿಸುತ್ತವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಹಾನಗಲ್ಲ ಕೇಂದ್ರದ ಸಂಚಾಲಕಿ ಬಿ.ಕೆ. ಶೈಲಜಾ ಹೇಳಿದರು.ಇಲ್ಲಿನ ಈಶ್ವರ ನಗರದ ಬ್ರಹ್ಮಕುಮಾರಿ ಕೇಂದ್ರದಲ್ಲಿ ಗುರುವಾರ ನಡೆದ ಹಳೆ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿದ ಆಚರಣೆಯಲ್ಲಿ ಅವರು ಸಂದೇಶ ನೀಡಿದ ಅವರು, ಜಗತ್ತು ಹಲವು ಪ್ರಶ್ನೆಗಳ ಗೂಡಾಗಿ ಬದುಕು ನಿಸ್ತೇಜಗೊಳ್ಳುತ್ತಿದೆ. ಪ್ರತಿನಿತ್ಯ ಮನಸ್ಸಿಗೆ ಆಘಾತವಾಗುವ ಸುದ್ದಿಗಳನ್ನೇ ಕೇಳಬೇಕಾಗಿದೆ. ಚಾರಿತ್ರ್ಯ ಹೀನ ಸಂಗತಿಗಳಿಗೆ ಒತ್ತು ಸಿಗುತ್ತಿದೆ. ಅದಕ್ಕಾಗಿಯೇ ಧರ್ಮ, ಸಂಸ್ಕಾರ, ಆಧ್ಯಾತ್ಮಿಕ ಆಲೋಚನೆಗಳ ಮೂಲಕ ನಾವು ಪರಿಶುದ್ಧ ಚಿಂತನೆಗೆ ಮುಂದಾಗುವ ಅವಶ್ಯಕತೆ ಇದೆ ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ನಮ್ಮ ಮನಸ್ಸು, ಬುದ್ಧಿ, ವಿವೇಕಗಳಿಗೆ ಧರ್ಮ ಸಂಸ್ಕಾರದ ಅಗತ್ಯವಿದೆ. ನಮ್ಮ ಮನಸ್ಸೆ ದೇವರ ಸ್ಥಾನದಲ್ಲಿ ನಿಂತು ಆಲೋಚಿಸಬೇಕು. ಸತ್ಕಾರ್ಯಗಳು ನಿಜವಾದ ದೇವರ ಪೂಜೆ. ಯಾವುದೇ ವಿಷಯಗಳ ಬಗ್ಗೆ ನಕಾರಾತ್ಮಕ ಯೋಚನೆಗಳು ಬೇಡ. ಸಕಾರಾತ್ಮಕವಾಗಿ ಸ್ವೀಕರಿಸಿ, ಪರಿಶೀಲಿಸಿ ಪಡೆದುಕೊಂಡರೆ, ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳಲು ಸಾಧ್ಯ ಎಂದರು. ನಾಗರತ್ನ ಶೇಟ್ ಇದ್ದರು.