ತಾಯಿ ಹುಲಿಯೊಂದಿಗೆ 4 ಹುಲಿ ಮರಿಗಳು ಪ್ರತ್ಯಕ್ಷ

| Published : Jan 01 2025, 12:01 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಮೂರ್ಕೆರೆಯಲ್ಲಿ ತಾಯಿ ಹುಲಿಯೊಂದಿಗೆ ನಾಲ್ಕು ಹುಲಿ ಮರಿ ಕಾಣಿಸಿಕೊಂಡಿರುವುದು.

ಗುಂಡ್ಲುಪೇಟೆ: ೨೦೨೫ ಹೊಸ ವರ್ಷದ ಮುನ್ನ ದಿನ ಮಂಗಳವಾರ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ಜೋನ್‌ನಲ್ಲಿ ನಾಲ್ಕು ಮರಿಗಳೊಂದಿಗೆ ಹುಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಂಡಿದೆ. ಬಂಡೀಪುರ ವಲಯದ ಸಫಾರಿ ಜೋನ್‌ನ ಮೂರ್ಕೆರೆಯಲ್ಲಿ ತಾಯಿ ಹುಲಿ ನೀರು ಕುಡಿಯುವಾಗ ನಾಲ್ಕು ಮರಿಗಳು ಕಾಣಿಸಿಕೊಂಡಿವೆ. ಬಳಿಕ ಕಾಡಿನೊಳಗೆ ಹುಲಿ ಮರಿಗಳು ಕಾಡಿನೊಳಗೆ ಹೋಗುವಾಗ ತಾಯಿ ಹುಲಿ ಹಿಂಬಾಲಿಸಿದ ಫೋಟೋ ಪ್ರವಾಸಿಗರ ಕ್ಯಾಮೆರಾಗೆ ಸೆರೆಯಾಗಿವೆ. ಹೊಸ ವರ್ಷದ ಮುನ್ನ ದಿನಾ ತಾಯಿ ಹುಲಿಯೊಂದಿಗೆ ನಾಲ್ಕು ಹುಲಿ ಮರಿಗಳು ಕಾಣಿಸಿಕೊಂಡಿರುವುದು ಪ್ರವಾಸಿಗರಲ್ಲಿ ಖುಷಿ ಆಗಿದೆ ಎಂದು ಬಂಡೀಪುರ ವಲಯ ಅರಣ್ಯಾಧಿಕಾರಿ ಮಹದೇವು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.