ಸಾರಾಂಶ
ಹಿಟ್ ಅಂಡ್ ರನ್ ಪ್ರಕರಣದ ಚಾಲಕರಿಗೆ ಸೆಕ್ಷನ್ 106(1) ಮತ್ತು (2)ಕಾಯ್ದೆ ಅನ್ವಯ ೧೦ ವರ್ಷ ಜೈಲು ೭ ಲಕ್ಷ ರು. ದಂಡದ ಕಾನೂನನ್ನು ಕೇಂದ್ರ ಸರಕಾರ ವಾಪಸ್ಸು ಪಡೆಯಬೇಕು: ಲಾರಿ ಮಾಲೀಕರು, ಚಾಲಕರ ಒತ್ತಾಯ
ಕನ್ನಡಪ್ರಭ ವಾರ್ತೆ ಶಿರಾ
ಹಿಟ್ ಅಂಡ್ ರನ್ ಪ್ರಕರಣದ ಚಾಲಕರಿಗೆ ಸೆಕ್ಷನ್ 106(1) ಮತ್ತು (2)ಕಾಯ್ದೆ ಅನ್ವಯ ೧೦ ವರ್ಷ ಜೈಲು ೭ ಲಕ್ಷ ರು. ದಂಡದ ಕಾನೂನನ್ನು ಕೇಂದ್ರ ಸರಕಾರ ವಾಪಸ್ಸು ಪಡೆಯಬೇಕು ಎಂದು ಶಿರಾ ತಾಲೂಕು ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ನಾಸೀರ್ ಖಾನ್ ಒತ್ತಾಯಿಸಿದರು.ಬುಧವಾರ ನಗರದ ದರ್ಗಾ ಸರ್ಕಲ್‌ನಲ್ಲಿ ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವ ಚಾಲಕರೂ ಬೇಕು ಎಂದು ಅಪಘಾತ ಮಾಡುವುದಿಲ್ಲ. ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ಇಂತಹ ಘಟನೆಗೆ ಚಾಲಕರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ೭ ಲಕ್ಷ ರು. ದಂಡ ವಿಧಿಸುವ ಕಾನೂನು ಮಾಡಿದರೆ ಚಾಲಕರು ಏನು ಮಾಡಬೇಕು. ಈಗಾದರೇ ನಾವು ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದು ಹೇಗೆ ಎಂದ ಅವರು ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರು ಹಿಟ್ ಅಂಡ್ ರನ್ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ರೆಹಮತ್ ಉಲ್ಲಾ ಖಾನ್, ಸಿಖಂದರ್ ಸಾಬ್, ಇದಾಯಿತ್ ಉಲ್ಲಾ ಖಾನ್, ಸೈಯದ್ ನೌಶಾದ್, ಅಬ್ದುಲ್ ರೆಹಮಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.