ರಾಜ್ಯದಲ್ಲಿ ಶಿಕ್ಷಕರಿಗೆ ಸಂಬಳ ನೀಡದೇ, ಸರ್ಕಾರ ದಿವಾಳಿ: ನಾರಾಯಣಸ್ವಾಮಿ ಟೀಕೆ

| Published : May 10 2024, 01:45 AM IST

ರಾಜ್ಯದಲ್ಲಿ ಶಿಕ್ಷಕರಿಗೆ ಸಂಬಳ ನೀಡದೇ, ಸರ್ಕಾರ ದಿವಾಳಿ: ನಾರಾಯಣಸ್ವಾಮಿ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಶಿಕ್ಷಕರಿಗೆ ಸಂಬಳ ನೀಡಿದಂತಹ ದಯನೀಯ ಸ್ಥಿತಿಗೆ ರಾಜ್ಯ ಸರ್ಕಾರ ತಲುಪಿದ್ದು, ಸರ್ಕಾರ ದಿವಾಳಿ ಆಗಿದೆ ಎಂದು ವಿಧಾನ ಪರಿಷತ್ತು ಸದಸ್ಯರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ಆಗ್ನೇಯ ಶಿಕ್ಷಕರ ಕ್ಷೇತ್ರ ಅಭ್ಯರ್ಥಿಯಿಂದ ಮತಯಾಚನೆ- - - ದಾವಣಗೆರೆ: ರಾಜ್ಯದ ಶಿಕ್ಷಕರಿಗೆ ಸಂಬಳ ನೀಡಿದಂತಹ ದಯನೀಯ ಸ್ಥಿತಿಗೆ ರಾಜ್ಯ ಸರ್ಕಾರ ತಲುಪಿದ್ದು, ಸರ್ಕಾರ ದಿವಾಳಿ ಆಗಿದೆ ಎಂದು ವಿಧಾನ ಪರಿಷತ್ತು ಸದಸ್ಯರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.

ಗುರುವಾರ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ವರ್ಗಕ್ಕೆ ಕಳೆದ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಸಂಬಳ ಮಾಡಿ ಅಂತ ಹೇಳಿ ಶಿಕ್ಷಕರು, ಜನಪ್ರತಿನಿಧಿಗಳು, ಶಿಕ್ಷಕ ಸಂಘಟನೆಗಳು ಒತ್ತಾಯ ಮಾಡಿದ್ದಾರೆ. ಅದರೂ, ಸರ್ಕಾರ ಕೇರ್ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸಂಬಳಕ್ಕೂ ದುಡ್ಡು ಇಲ್ಲದೇ ಸರ್ಕಾರ ದಿವಾಳಿಯಾಗಿದೆ. ಶಿಕ್ಷಣ ಮಂತ್ರಿಗಳ ನಿರ್ಲಕ್ಷ್ಯ ಖಂಡನೀಯ. ಸರ್ಕಾರ ಸಂಜೆಯೊಳಗೆ ಶಿಕ್ಷಕರ ಸಂಬಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಬಿ.ಎನ್.ರಾಮ್ ರೆಡ್ಡಿ, ಮುಬಾರಕ್ ಅಲಿ, ಸಿದ್ದಪ್ಪ, ಚಂದ್ರಪ್ಪ, ಸಾಂಬಾ ಶಿವಯ್ಯ, ಯೋಗೀಶ್ ಸೇರಿದಂತೆ ವೈಎಎನ್ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

- - - -9ಕೆಡಿವಿಜಿ56ಃ:

ದಾವಣಗೆರೆಯಲ್ಲಿ ವೈ.ಎ.ನಾರಾಯಣ ಸ್ವಾಮಿ ವಿವಿಧೆಡೆ ಮತಯಾಚನೆ ಮಾಡಿದರು.