ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಾಕ್ಷಿ; ಪೂರ್ವಜನ್ಮದ ಪುಣ್ಯ

| Published : Jan 22 2024, 02:17 AM IST

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಾಕ್ಷಿ; ಪೂರ್ವಜನ್ಮದ ಪುಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಂದಿರ ಪುನಾ ನಿರ್ಮಾಣ ತನ್ನ ಜನ್ಮ ಸ್ಥಾನದಲ್ಲಿಯೇ ಶ್ರೀರಾಮನ ಪ್ರತಿಷ್ಠಾಪನೆ, ಬರಲಿರುವ ಸಮಯದಲ್ಲಿ ಭಾರತವನ್ನು ನಮ್ಮೆಲ್ಲ ಹಿರಿಯರ ಆಶಯದಂತೆ ಜಗದ್ಗುರುವಿನ ಸ್ಥಾನದಲ್ಲಿ ಮೆರೆಸಲು ನಿಸ್ಸಂಶಯವಾಗಿ ಎಲ್ಲಾ ಭಾರತೀಯರಿಗೆ ಪ್ರೇರಣೆ ಸಿಗುತ್ತದೆ.

ಪ್ರಾಣ ಪ್ರತಿಷ್ಠಾಪನೆ ನೋಡುವ ಭಾಗ್ಯ, ಭಾರತೀಯರಿಗೆ ಮರೆಯಲಾಗದ ಕ್ಷಣ: ಡಾ.ಶಿವಯೋಗಿಸ್ವಾಮಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯಲ್ಲಿ ಸೋಮವಾರ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ರಾಮಮಂದಿರ ಲೋಕಾರ್ಪಣೆಗೆ ನಾವು ಸಾಕ್ಷಿಯಾಗುತ್ತಿರುವುದು ಪೂರ್ವಜನ್ಮದ ಪುಣ್ಯ ಎಂದು ವಿಧಾನಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ತಿಳಿಸಿದ್ದಾರೆ.

ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿದ್ದ ಭವ್ಯ ದೇಗುಲ ಕೆಡವಿ, ಅದೇ ಜಾಗದಲ್ಲಿ ಬಾಬ್ರಿ ಮಸೀದಿ ತೆರವಿಗೆ ಹಿಂದು ಸಮಾಜವು ಸತತ ಹೋರಾಟ ನಡೆಸಿಕೊಂಡೇ ಬಂದಿತ್ತು, ಶತಮಾನಗಳ ಹೋರಾಟದ ನಂತರ 6.12.1992ರಂದು ಆ ಕಳಂಕಿತ ಕಟ್ಟಡ ತೆರವುಗೊಳಿಸುವ, ತಾತ್ಕಾಲಿಕ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುವ ಪುಣ್ಯವೂ ನನ್ನದಾಗಿತ್ತು. ಇಂದು ಶ್ರೀರಾಮ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನೋಡುವ ಭಾಗ್ಯ ಸಮಸ್ತ ಭಾರತೀಯರಿಗೆ ಮರೆಯಲಾಗದ ಅತ್ಯದ್ಭುತ ಘಳಿಗೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀರಾಮ ಮಂದಿರ ಲೋಕಾರ್ಪಣೆಗಾಗಿ ಜಗತ್ತಿನಾದ್ಯಂತ ಐತಿಹಾಸಿಕ ಕ್ಷಣಗಳ ಇದಿರು ನೋಡುತ್ತಿದೆ. ರಾಮ ಭಕ್ತಿ, ರಾಷ್ಟ್ರ ಭಕ್ತಿ ಉದ್ಘೋಷಕ್ಕೆ ಅನ್ವರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂದಿರ ಪುನಾ ನಿರ್ಮಾಣ ತನ್ನ ಜನ್ಮ ಸ್ಥಾನದಲ್ಲಿಯೇ ಶ್ರೀರಾಮನ ಪ್ರತಿಷ್ಠಾಪನೆ, ಬರಲಿರುವ ಸಮಯದಲ್ಲಿ ಭಾರತವನ್ನು ನಮ್ಮೆಲ್ಲ ಹಿರಿಯರ ಆಶಯದಂತೆ ಜಗದ್ಗುರುವಿನ ಸ್ಥಾನದಲ್ಲಿ ಮೆರೆಸಲು ನಿಸ್ಸಂಶಯವಾಗಿ ಎಲ್ಲಾ ಭಾರತೀಯರಿಗೆ ಪ್ರೇರಣೆ ಸಿಗುತ್ತದೆ. ಇಂತಹ ಐತಿಹಾಸಿಕ ಕಾರ್ಯಕ್ಕೆ ಕಾರಣಕರ್ತರಾದ ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನ ಹಿರಿಯರು, ಮಾರ್ಗದರ್ಶನ ನೀಡಿದ ಸಂತ ಮಹಾಂತರರಿಗೂ, ಕೋಟಿ ಕೋಟಿ ಹಿಂದುಗಳ ಭಾವನೆಗಳನ್ನು ಮೂರ್ತಿಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೂ ಸಮಸ್ತ ಹಿಂದುಗಳ ಪರವಾಗಿ ಶತ ಶತ ನಮನಗಳು ಎಂದು ಡಾ.ಶಿವಯೋಗಿಸ್ವಾಮಿ ತಿಳಿಸಿದ್ದಾರೆ.