ಸಾಧಕ ಮಹಿಳೆ ಅಯಿನಮಂಡ ಲೀಲಾವತಿ ಗಣಪತಿ ಸನ್ಮಾನ

| Published : Jul 11 2024, 01:37 AM IST

ಸಾರಾಂಶ

ನಾಟಿ ವೈದ್ಯಕೀಯ ಕ್ಷೇತ್ರದಲ್ಲಿನ ಲೀಲಾವತಿ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಕಾಯಕ ರತ್ನ ಪ್ರಶಸ್ತಿ ಘೋಷಿಸಿದ ಹಿನ್ನಲೆಯಲ್ಲಿ ಕುಶಾಲನಗರದ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಲೀಲಾವತಿ ನಿವಾಸಕ್ಕೆ ತೆರಳಿ‌ ಗೌರವಿಸಿ, ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರ ಮಾದಾಪಟ್ಟಣ ಗ್ರಾಮದ ನಾಟಿ ವೈದ್ಯೆ ಮಕ್ಕಳ ಜೀವ ಸಂಜೀವಿನಿ ಅಯಿನಮಂಡ ಲೀಲಾವತಿ ಗಣಪತಿ ಅವರನ್ನು ಗೌರವಿಸಲಾಯಿತು.

ನಾಟಿ ವೈದ್ಯಕೀಯ ಕ್ಷೇತ್ರದಲ್ಲಿನ ಲೀಲಾವತಿ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಕಾಯಕ ರತ್ನ ಪ್ರಶಸ್ತಿ ಘೋಷಿಸಿದ ಹಿನ್ನಲೆಯಲ್ಲಿ ಮಹಿಳಾ ವೇದಿಕೆ ಪದಾಧಿಕಾರಿಗಳು ಲೀಲಾವತಿ ನಿವಾಸಕ್ಕೆ ತೆರಳಿ‌ ಗೌರವಿಸಿ, ಅಭಿನಂದಿಸಿದರು.

ಸಾವಿರಾರು ಶಿಶುಗಳನ್ನು ನಾಟಿ ಮದ್ದಿನಿಂದ ಗುಣಮುಖರಾಗಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಲೀಲಾವತಿ ಗಣಪತಿ ಸೇವೆಯನ್ನು ಸಂಘದ ಪದಾಧಿಕಾರಿಗಳು ಶ್ಲಾಘಿಸಿದರು.

ಮಹಿಳಾ ವೇದಿಕೆ ಅಧ್ಯಕ್ಷೆ ಜೆ.ಫಿಲೋಮಿನಾ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗಾಗಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಕಾರ್ಯನಿರ್ವಹಿಸಲಿದೆ. ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯು ಕಾರಣಾಂತರಗಳಿಂದ ಕೆಲವು ವರ್ಷಗಳ ಕಾಲ ಸಂಘಟನೆಯ ಕಾರ್ಯಸ್ಥಗಿತವಾಗಿತ್ತು. ಇದೀಗ ಸಮಿತಿ ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಕಾರ್ಯಾರಂಭ ಮಾಡಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ವೇದಿಕೆ ಸದಾ ಹೋರಾಡಲಿದೆ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಪುಟ್ಟತಾಯಮ್ಮ ಇದೀಗ ಸ್ವಂತ ಮನೆಯಲ್ಲೇ ಕಿರುಕುಳಕ್ಕೆ‌ ಒಳಗಾಗುತ್ತಿದ್ದು ಈ ಬಗ್ಗೆ ವೇದಿಕೆ ಗಮನಕ್ಕೆ ತಂದ ಹಿನ್ನಲೆಯಲ್ಲಿ ಅವರಿಗೆ ನ್ಯಾಯ ಒದಗಿಸಿಕೊಡಲು ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.

ವೇದಿಕೆಯ ಗೌರವ ಸಲಹೆಗಾರ ವನಿತಾ ಚಂದ್ರಮೋಹನ್ ಮಾತನಾಡಿ, ಮಹಿಳೆಯರ ಪರ ಧ್ವನಿಯಾಗಿರುವ ವೇದಿಕೆಯ ಹೋರಾಟಗಳಿಗೆ ಫಲ ದೊರೆತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಲಿ ಎಂದು ಆಶಿಸಿದರು.

ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷೆ ಎಂ.ಪಿ.ಜಯಲಕ್ಷ್ಮಿ, ಕಾರ್ಯದರ್ಶಿ ಪದ್ಮಾವತಿ, ಸಹ ಕಾರ್ಯದರ್ಶಿ ಬಿ.ಪಾರ್ವತಿ, ಗೌರವಾಧ್ಯಕ್ಷೆ ಪದ್ಮಾವತಿ ಪರಮೇಶ್, ಸಂಘಟನಾ ಕಾರ್ಯದರ್ಶಿ ಜಯಾ ಪ್ರಕಾಶ್, ನಿರ್ದೇಶಕರಾದ ಜಯಶ್ರೀ ವಸಂತ್, ಭಾಗ್ಯ, ಲಲಿತಾ ತಿಮ್ಮಯ್ಯ, ಸಾವಿತ್ರಿ ರಾಜನ್, ಗೌರಿ, ಉಷಾ, ಪದ್ಮಾವತಿ ಕೃಷ್ಣೇಗೌಡ, ಪದ್ಮಾವತಿ ಪರಮೇಶ್ವರ್, ಸುನಂದಾ, ಲಲಿತಾ ಮೊಣ್ಣಪ್ಪ, ಧರಣಿ ಸೋಮಯ್ಯ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರ ಮೋಹನ್, ಸದಸ್ಯೆ ಚೈತನ್ಯ ಇದ್ದರು.