woman, died, falling, moving, motorcycle,
ಅಜ್ಜಂಪುರ: ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಅಜ್ಜಂಪುರ ತಾಲೂಕಿನಲ್ಲಿ ಅ.20ರಂದು ನಡೆದಿದೆ. ಅಮೃತಾಪುರದ ಎ.ಪಿ. ಮುರುಗೇಂದ್ರಯ್ಯ ಅವರ ಪತ್ನಿ ಎಚ್.ಆರ್. ಈರಮ್ಮ (50) ಮೃತರು. ಅವರು ಪತಿಯೊಂದಿಗೆ ಚೌಳಹಿರಿಯೂರಿನ ತವರು ಮನೆಗೆ ತೆರಳುತ್ತಿದ್ದಾಗ ಗೌರಾಪುರ–ಕಾಟಿಗನರೆ ನಡುವಿನ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಈರಮ್ಮ ರಸ್ತೆಗೆ ಬಿದ್ದ ಪರಿಣಾಮ ತಲೆ ಮತ್ತು ಕಿವಿಗೆ ಗಾಯಗಳಾಗಿವೆ. ಅವರನ್ನು ಆಂಬುಲೆನ್ಸ್ನಲ್ಲಿ ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದಾಗಿ ಮೃತರ ಪತಿ ತಿಳಿಸಿರುವುದಾಗಿ ಅವರ ಪುತ್ರ ಪ್ರದೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಜ್ಜಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
