ಸಾರಾಂಶ
ಬೈಕಿನಿಂದ ಕೆಳಗೆ ಬಿದ್ದ ರೂಪಾರವರ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿಯ ತೊಡೆಗೆ ಪೆಟ್ಟು ಬಿದ್ದಿದ್ದು ಮಗುವಿಗೆ ಯಾವುದೇ ತೊಂದರೆ ಆಗಿಲ್ಲ.
ರಾಮನಗರ: ಕೆಎಸ್ಆರ್ ಟಿಸಿ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯ ಬಸವನಪುರ ಅಂಡರ್ ಪಾಸ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಯರೇಹಳ್ಳಿ ರಂಗಯ್ಯನದೊಡ್ಡಿ ಗ್ರಾಮದ ಎಂ.ರೂಪಾ (27) ಮೃತರು. ಎಂ.ರೂಪಾ ತನ್ನ ಪತಿ ಮತ್ತು ಮಗುವಿನ ಜೊತೆ ಬೈಕ್ ನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಬಸವನಪುರ ಬಳಿಯ ಅಂಡರ್ ಪಾಸ್ ಸಮೀಪ ಸಾರಿಗೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕಿನಿಂದ ಕೆಳಗೆ ಬಿದ್ದ ರೂಪಾರವರ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿಯ ತೊಡೆಗೆ ಪೆಟ್ಟು ಬಿದ್ದಿದ್ದು ಮಗುವಿಗೆ ಯಾವುದೇ ತೊಂದರೆ ಆಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.