ಮಹಿಳೆ ಪುರುಷನಷ್ಟೆ ಸರಿ ಸಮಾನ

| Published : Mar 28 2025, 12:35 AM IST

ಸಾರಾಂಶ

Woman, equal, man

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಾಧನೆ ಮಾಡಲು ಪ್ರಯತ್ನಿಸಿದರೇ ಬದುಕಿನಲ್ಲಿ ಯಾವುದು ಅಸಾಧ್ಯವಾಗುವುದಿಲ್ಲ. ಮಹಿಳೆ ಪುರುಷನಷ್ಟೆ ಸರಿ ಸಮಾನವಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿ ಸ್ವಾಸ್ಥ್ಯೆ ಸಮಾಜಕ್ಕೆ ಕಾರಣರಾಗಬೇಕು ಎಂದು ಕಾದರವಳ್ಳಿಯ ಸದ್ಗುರು ಅದೃಶ್ಯಾನಂದ ಸೀಮಿಮಠದ ಡಾ.ಪಾಲಾಕ್ಷ ಸ್ವಾಮೀಜಿ ನುಡಿದರು.

ತಾಲೂಕಿನ ಜಕ್ಕನಾಯ್ಕನಕೊಪ್ಪದ ಸದ್ಗುರು ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ 32ನೇ ಜಾತ್ರಾ ಮಹೋತ್ಸವ, ಶ್ರೀಮಠದ ಉತ್ತರಾಧಿಕಾರಿ ಮಾತೋಶ್ರೀ ಶಿವಯೋಗಿನಿ ತಾಯಿ ಅವರ ಪಟ್ಟಾಧಿಕಾರ ಹಾಗೂ ಲಕ್ಷ ದೀಪೋತ್ಸವ ಮತ್ತು ಮಹಾರಥೋತ್ಸವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜ ಬೆಳಗುವಲ್ಲಿ ಹಲವಾರು ಸಾಧು-ಸಂತರು ಪರಿಶ್ರಮಿಸಿದ್ದು, ಅವರ ಆಶಯಗಳನ್ನು ಈಡೇರಿಸುವಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು. ದೇವರಕೊಂಡದ ಚನ್ನವೃಷಭೇಂದ್ರರು ನಡೆದಾಡಿದ ನೆಲ ಪಾವನ ಕ್ಷೇತ್ರಗಳಾಗಿದ್ದು , ಈಗಾಗಿ ಜಕ್ಕನಾಯ್ಕನಕೊಪ್ಪ ಶ್ರೀಮಠವು ಭವಿಷ್ಯದಲ್ಲಿ ಭಕ್ತರಿಗೆ ಅನ್ನ, ಆಶ್ರಯ ನೀಡುವಂತಾಗಲಿ ಎಂದರು.ಯರಗೊಪ್ಪದ ಚನ್ನವೃಷಭೇಂದ್ರ ಲೀಲಾಮಠದ ನಿತ್ಯನಾಂದ ಸ್ವಾಮೀಜಿ ಮಾತನಾಡಿ, ಮಾನವ ಜೀವನ ಸಾರ್ಥಕವಾಗಬೇಕಾದರೇ ಸಜ್ಜನರ ಸಂಘ ಮಾಡಬೇಕು. ಮಠಗಳಲ್ಲಿ ಜರುಗುವ ಪುರಾಣ, ಪ್ರವಚನಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕು. ಘಟದಿಂದ ಮಠ ಬೆಳಗಿ ಭಕ್ತರಿಗೆ ಸದಾ ಮಾರ್ಗದರ್ಶನ ಮಾಡುತ್ತ ಶಿವಯೋಗಿನಿ ಮಾತೆಯವರು ಸಮಾಜಕ್ಕೆ ಬೆಳಕಾಗಿ ಗೋಚರವಾದಾಗ ಮಾತ್ರ ಸಾಧಕರ ಶ್ರಮ ಸಾರ್ಥಕವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.ಚಿಕ್ಕಂಬಿಯ ಅಜಾತ ನಾಗಲಿಂಗ ಮಠದ ನಾಗಲಿಂಗ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಮಲ್ಲಾಪೂರದ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹನುಮನಹಳ್ಳಿಯ ಶಿವಬಸವ ಸ್ವಾಮೀಜಿ, ಮುರನಾಳದ ಜಗನ್ನಾಥ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಅಕ್ಕಮಹಾದೇವಿ ತಾಯಿ, ಲಲಿತಮ್ಮ ತಾಯಿ, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಅಲ್ಪಸಂಖ್ಯಾತರ ಇಲಾಖೆಯ ಹಾವೇರಿಯ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ, ಭಾಂವಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ ಚಿಕ್ಕಮಠ, ಹಣ್ಣಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ ಪಾಟೀಲ, ಭಾಂವಿಹಾಳ ಗ್ರಾಪಂ ಪಿಡಿಒ ಮಂಜುಳಾ ಅಂಗಡಿ, ಮಾಜಿ ಗ್ರಾಪಂ ಅಧ್ಯಕ್ಷ ಫಕ್ಕೀರಪ್ಪ ಮುತ್ತಗಿ ಮುಂತಾದವರು ವೇದಿಕೆ ಮೇಲಿದ್ದರು. ವಿಶೇಷ ಪೂಜೆ, ಪಾಲಕ್ಕಿ ಉತ್ಸವ ಅದ್ಧೂರಿ

ಚನ್ನವೃಷಬೇಂದ್ರರ ಕರ್ತು ಗದ್ದುಗೆಗೆ ವಿಶೇಷ ಪೂಜೆ, ಪ್ರಾರ್ಥನೆ, ರುದ್ರಾಭಿಷೇಕ ಪಾಲಕ್ಕಿ ಉತ್ಸವ ಜರುಗಿದವು. ಮಾತೆ ಶಿವಯೋಗಿನಿ ತಾಯಿ ಅವರ ಸಾರೋಟ ಮೆರವಣಿಗೆ, ಕೀರಿಟ ಧಾರಣೆ, ಪಟ್ಟಾಧಿಕಾರ ಮಹೋತ್ಸವ, ಮಹಾರಥೋತ್ಸವವು ಅದ್ಧೂರಿಯಾಗಿ ನಡೆದವು. ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು. ಅನ್ನಪ್ರಸಾದ ಏರ್ಪಡಿಸಲಾಗಿತ್ತು. ಅಪ್ಪುರಾಜ ಬಡಿಗೇರ ಬಳಗದಿಂದ ಸಂಗೀತ ಸೇವೆ, ಪ್ರತಿದಿನ ಕೀರ್ತನ ಕೇಸರಿ ಸಂತೋಷಕುಮಾರ ಹೊನ್ಯಾಳ ಅವರಿಂದ ಚನ್ನವೃಷಭೇಂದ್ರ ಅಜ್ಜನವರ ಕಥಾಮೃತ ಚರಿತ್ರೆ ಪುರಾಣ ಜರುಗಿತು. ಬಸಲಿಂಗಪ್ಪ ಗೌಡರ ಸ್ವಾಗತಿಸಿದರು. ಶಿವಾನಂದ ತೋರಣಗಟ್ಟಿ ನಿರೂಪಿಸಿದರು. ಬಸಪ್ಪ ಶಾಸ್ತ್ರಿ ವಂದಿಸಿದರು.