ಚಿರತೆ ದಾಳಿಗೊಳಗಾದ ಮಹಿಳೆಗೆ ಗಂಭೀರ ಗಾಯ

| Published : Jul 31 2025, 12:45 AM IST

ಸಾರಾಂಶ

ಕೆಂಪೇಗೌಡನದೊಡ್ಡಿ ಬೈಪಾಸ್ ರಸ್ತೆಯ ಹತ್ತಿರ ಚಿರತೆ ಏಕಾಏಕಿ ದಾಳಿ‌ ನಡೆಸಿ, ಎಳೆದಾಡಿದೆ. ದೇಹದ ವಿವಿಧ ಭಾಗಗಳಲ್ಲಿ ಕಚ್ಚಿ ,ಉಗುರಿನಿಂದ ಪರಚಿ ಮನಬಂದಂತೆ ಗಾಯಗೊಳಿಸಿದೆ.

ರಾಮನಗರ:

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಪೇಗೌಡನದೊಡ್ಡಿ ಬಳಿ ಮಂಗಳವಾರ ರಾತ್ರಿ ನಡೆದಿದೆ.

ತಾಲೂಕಿನ ಪಾದರಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಮೋಹನ್ ರಾಮ್ ಮನ್ನಾರ್ ಪತ್ನಿ ಎನ್.ಮಾನಸ (35)ಚಿರತೆ ದಾಳಿಗೊಳಗಾದ ಮಹಿಳೆ. ಪ್ರತಿನಿತ್ಯದಂತೆ ಶಾಲೆಯಿಂದ ಮಗುವನ್ನು ಕರೆದುಕೊಂಡು ಹೋಗಲು ಪಾದರಹಳ್ಳಿ ಯಿಂದ ರಾಮನಗರ ಕಡೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಮಂಗಳವಾರ ರಾತ್ರಿ‌ ಸುಮಾರು 7 ಗಂಟೆ ಸಮಯದಲ್ಲಿ ಕೆಂಪೇಗೌಡನದೊಡ್ಡಿ ಬೈಪಾಸ್ ರಸ್ತೆಯ ಹತ್ತಿರ ಚಿರತೆ ಏಕಾಏಕಿ ದಾಳಿ‌ ನಡೆಸಿ, ಎಳೆದಾಡಿದೆ. ದೇಹದ ವಿವಿಧ ಭಾಗಗಳಲ್ಲಿ ಕಚ್ಚಿ ,ಉಗುರಿನಿಂದ ಪರಚಿ ಮನಬಂದಂತೆ ಗಾಯಗೊಳಿಸಿದೆ.

ಹಲ್ಲೆಗೊಳಗಾದ ಮಹಿಳೆ ಮಾನಸ ನಗರದ ನಾರಾಯಣ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಾನಸರವರ ಆರೋಗ್ಯ ವಿಚಾರಿಸಿದರು.30ಕೆಆರ್ ಎಂಎನ್ 5.ಜೆಪಿಜಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿರತೆ ದಾಳಿಗೊಳಗಾದ ಮಾನಸ