ಗೃಹಲಕ್ಷ್ಮೀ ಹಣ ಕನಕ ಪಂಚಮಿ ಕಾರ್ಯಕ್ರಮಕ್ಕೆ ನೀಡಿದ ಮಹಿಳೆ

| Published : Oct 27 2025, 02:00 AM IST

ಗೃಹಲಕ್ಷ್ಮೀ ಹಣ ಕನಕ ಪಂಚಮಿ ಕಾರ್ಯಕ್ರಮಕ್ಕೆ ನೀಡಿದ ಮಹಿಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ: ಪಟ್ಟಣದ ನೀಲಮ್ಮ ಭೀಮನಗೌಡ ಹೊಸಮನಿ ಅವರು ರಾಜ್ಯ ಸರ್ಕಾರ ಮನೆಯ ಯಜಮಾನಿಗೆ ನೀಡುವ ಗೃಹಲಕ್ಷ್ಮೀ ಯೋಜನೆಯವ ಹಣ ₹25000 ಕನಕ ಪಂಚಮಿ ಕಾರ್ಯಕ್ರಮಕ್ಕೆ ನೀಡುವ ಮೂಲಕ ಅಭಿಮಾನ ತೋರ್ಪಡಿಸಿದ್ದಾರೆ.

ಬಾದಾಮಿ: ಪಟ್ಟಣದ ನೀಲಮ್ಮ ಭೀಮನಗೌಡ ಹೊಸಮನಿ ಅವರು ರಾಜ್ಯ ಸರ್ಕಾರ ಮನೆಯ ಯಜಮಾನಿಗೆ ನೀಡುವ ಗೃಹಲಕ್ಷ್ಮೀ ಯೋಜನೆಯವ ಹಣ ₹25000 ಕನಕ ಪಂಚಮಿ ಕಾರ್ಯಕ್ರಮಕ್ಕೆ ನೀಡುವ ಮೂಲಕ ಅಭಿಮಾನ ತೋರ್ಪಡಿಸಿದ್ದಾರೆ. ಬಹುತೇಕ ಮಹಿಳೆಯರು ಸರ್ಕಾರದ ಈ ಯೋಜನೆಯಿಂದ ಬಂದ ಹಣವನ್ನು ಕುಟುಂಬ ನಿರ್ವಹಣೆ, ಇಲ್ಲವೆ ವೈಯಕ್ತಿಕ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ನೀಲಮ್ಮ ಅವರು ಪ್ರತಿತಿಂಗಳು ಬರುವ ಹಣ ಕೂಡಿಟ್ಟು ಸಮಾಜದ ಕಾರ್ಯಕ್ರಮಕ್ಕೆ ನೀಡುವ ಮೂಲಕ ತಮಗಿರುವ ಸಾಮಾಜಿಕ ಬದ್ಧತೆ ಪ್ರದರ್ಶಿಸಿದ್ದಾರೆ. ನೀಲಮ್ಮ ಕನಕ ಪಂಚಮಿ ಕಾರ್ಯಕ್ರಮ ಸಂಘಟರಿಗೆ ಹಣ ತಲುಪಿಸಿದರು.