ಚಿಂತಾಮಣಿಯಲ್ಲಿ ಮಹಿಳೆಯ 35 ಗ್ರಾಂ. ಮಾಂಗಲ್ಯ ಸರ ಕಳವು

| Published : Nov 16 2024, 12:34 AM IST

ಸಾರಾಂಶ

ಶ್ರೀನಿವಾಸಪುರ ನಗರದ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುವಾಗ ಚಿನ್ನದ ಸರ ಕಳ್ಳತನವಾಗಿದೆ.

ಚಿಂತಾಮಣಿ: ಬಸ್‌ ಹತ್ತುವಾಗ ಮಹಿಳೆಯ 35 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವ ಘಟನೆ ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶ್ರೀನಿವಾಸಪುರ ನಗರದ ರಾಮಕೃಷ್ಣ ಬಡಾವಣೆಯ ನಿವಾಸಿ ರಮಾಮಣಿ (60) ಬಂದಿದ್ದು, ಕೋಲಾರ ರಸ್ತೆಯ ಕುರುಟಹಳ್ಳಿ ಗ್ರಾಮಕ್ಕೆ ತೆರಳುವ ಬಸ್‌ಗಾಗಿ ಕಾಯುತ್ತಿದ್ದರು. ಬಸ್ ಬಂದಾಗ ಸಂಜೆ 4.30ರ ಸಮಯದಲ್ಲಿ ಜನದಟ್ಟಣೆ ಹೆಚ್ಚಿತ್ತು. ಆಗ ಕಳ್ಳರು ಬಸ್ ಏರಿದ ಮಹಿಳೆಯ ಕತ್ತಿನಲ್ಲಿದ್ದ 35 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.